Crime News: ಮಕ್ಕಳೆದುರೇ ಪತ್ನಿಯನ್ನು ಚಾಕು ಇರಿದು ಕೊಂದ ಪಾಪಿ ಪತಿ!
ಲಕ್ನೋ:- ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ದಾದ್ರಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಸಹೋದ್ಯೋಗಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ಆಕೆಗೆ ಚಾಕು ಇರಿದು ಕೊಂದಿರುವ ಘಟನೆ ಜರುಗಿದೆ.
ಚಂಚಲ್ ಶರ್ಮಾ(28) ಕೊಲೆಯಾದ ಮಹಿಳೆ. ಸೋನು ಶರ್ಮಾ (36) ಹತ್ಯೆಗೈದ ಆರೋಪಿ. ಚಂಚಲ್ ಶರ್ಮಾ ಪಿಜ್ಜಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಸಹೋದ್ಯೋಗಿ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಕೆಲಸ ಬಿಡುವಂತೆ ಆತ ಒತ್ತಾಯ ಮಾಡಿದ್ದ. ಆದರೆ ಮಹಿಳೆ ಕುಟುಂಬದ ನಿರ್ವಹಣೆಗಾಗಿ ಕೆಲಸ ಬಿಡಲು
ನಿರಾಕರಿಸಿದ್ದಳು.
ಇದೇ ವಿಚಾರವಾಗಿ ಸೋನು, ಪತ್ನಿ ಜೊತೆ ಭಾನುವಾರ ಗಲಾಟೆ ಮಾಡಿದ್ದ. ಬಳಿಕ ಮುಖವನ್ನು ಬಟ್ಟೆಯಿಂದ ಮುಚ್ಚಿ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಕೆಯ ಕಿರುಚಾಟ ಕೇಳಿ ಏಳು ವರ್ಷದ ಮಗಳು ಮತ್ತು ಐದು ವರ್ಷದ ಮಗ ಎದ್ದು ತಪ್ಪಿಸಲು ಯತ್ನಿಸಿದ್ದರು. ಆದರೆ ಅವರನ್ನು ದೂರ ತಳ್ಳಿ ಕೊಲೆ ಮಾಡಿದ್ದ. ಕೊಲೆಗೈದ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ, ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?