ಭಾರತೀಯ ಈ ಇಬ್ಬರು ಸ್ಟಾರ್ ಆಟಗಾರಿಗೆ ಬ್ಯಾಟ್ ಕೊಡುಗೆ ಕೊಟ್ಟ ಬಾಂಗ್ಲಾ ಆಟಗಾರ!

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬಾಂಗ್ಲಾ ಆಟಗಾರ ಬ್ಯಾಟ್ ಗಿಫ್ಟ್ ನೀಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯದ ಬಳಿಕ ಶಕೀಬ್ ಅಲ್ ಹಸನ್ಗೆ ವಿರಾಟ್ ಕೊಹ್ಲಿ ಬ್ಯಾಟ್ ಗಿಫ್ಟ್ ನೀಡಿದ್ದರು. ಟೆಸ್ಟ್ ಕ್ರಿಕೆಟ್ ಕೆರಿಯರ್ಗೆ ನಿವೃತ್ತಿ ಘೋಷಿಸಿರುವ ಶಕೀಬ್ಗೆ ತಮ್ಮ ಸಹಿ ಹೊಂದಿರುವ ಬ್ಯಾಟ್ನ್ನು ಉಡುಗೊರೆಯಾಗಿ ನೀಡಿ ಕೊಹ್ಲಿ ಬೀಳ್ಕೊಟ್ಟಿದ್ದರು. ಇದರ ಬೆನ್ನಲ್ಲೇ ಮೆಹಿದಿ ಹಸನ್ ಮಿರಾಝ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್ಗಳನ್ನು ನೀಡಿದ್ದಾರೆ.
ಬಾಂಗ್ಲಾದೇಶ್ ತಂಡದ ಯುವ ಆಲ್ರೌಂಡರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್ಗಳನ್ನು ಗಿಫ್ಟ್ ನೀಡಲು ಮುಖ್ಯ ಕಾರಣ ಹೊಸ ಉದ್ಯಮ ಆರಂಭಿಸಿರುವುದು. ಅಂದರೆ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶದಲ್ಲಿ MKS ಹೆಸರಿನ ಬ್ಯಾಟ್ ನಿರ್ಮಾಣ ಕಂಪೆನಿಯನ್ನು ಆರಂಭಿಸಿದ್ದಾರೆ.
ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತನ್ನ ಕಂಪೆನಿಯ ಬ್ಯಾಟ್ಗಳೊಂದಿಗೆ ಆಗಮಿಸಿದ್ದ ಮೆಹಿದಿ ಹಸನ್ ಅದನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ, ಬ್ಯಾಟ್ ತುಂಬಾ ಚೆನ್ನಾಗಿದೆ. ಇದೇ ಕ್ವಾಲಿಟಿಯಲ್ಲಿ ಉತ್ತಮ ಬ್ಯಾಟ್ಗಳನ್ನು ನಿರ್ಮಿಸಿ ಎಂದು ವಿಶಸ್ ತಿಳಿಸಿದ್ದಾರೆ
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಮೆಹಿದಿ ಹಸನ್ ಮಿರಾಝ್ MKS ಹೆಸರಿನ ವಿಶೇಷ ಬ್ಯಾಟ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಹಿಟ್ಮ್ಯಾನ್, ಮೆಹಿದಿ ನನಗೆ ತುಂಬಾ ದಿನಗಳಿಂದ ಪರಿಚಯ. ಈಗ ಹೊಸ ಉದ್ಯಮ ಆರಂಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






