RCB ಫ್ಯಾನ್ಸ್​ಗೆ​ ಶಾಕ್: ತಂಡದಿಂದ ಸ್ಟಾರ್ ಯುವ ಬ್ಯಾಟರ್​​ ಔಟ್!

ಅಕ್ಟೋಬರ್ 5, 2024 - 21:05
 0  24
RCB ಫ್ಯಾನ್ಸ್​ಗೆ​ ಶಾಕ್: ತಂಡದಿಂದ ಸ್ಟಾರ್ ಯುವ ಬ್ಯಾಟರ್​​ ಔಟ್!

RCB ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದ್ದು, ತಂಡದಿಂದ ಸ್ಟಾರ್ ಯುವ ಬ್ಯಾಟರ್ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. 

ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಹೀಗಾಗಿ ಫ್ಯಾನ್ಸ್ ಆಘಾತಗೊಂಡಿದ್ದಾರೆ. 

ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಯಿಂದ ಔಟ್​ ಆಗಲಿರೋ ಪ್ಲೇಯರ್​ ಮತ್ಯಾರು ಅಲ್ಲ, ಸುಯಾಶ್ ಪ್ರಭುದೇಸಾಯಿ. ಈ ಸುದ್ದಿ ಆರ್​​ಸಿಬಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿರುವುದು ಅಚ್ಚರಿ. 

ಆರ್​​ಸಿಬಿ ತಂಡದ ಯುವ ಬ್ಯಾಟರ್​​ ಸುಯಾಶ್ ಪ್ರಭುದೇಸಾಯಿ. ಎರಡು ಸೀಸನ್​ಗಳ ಹಿಂದೆ 2023ರ ಐಪಿಎಲ್​ನಲ್ಲಿ ಆರಂಭದಲ್ಲಿ ಆರ್​​ಸಿಬಿ ಪರ ಕಮಾಲ್​ ಮಾಡಿದ್ದ ಈತ ನಂತರ ಹೇಳಿಕೊಳ್ಳುವಷ್ಟು ಪ್ರದರ್ಶನ ನೀಡಲಿಲ್ಲ. 2023ರ ಐಪಿಎಲ್​ನಲ್ಲಿ ಆರ್​​ಸಿಬಿ ಪರ 5 ಪಂದ್ಯ ಆಡಿದ್ದ ಸುಯಾಶ್ ಪ್ರಭುದೇಸಾಯಿ ಗಳಿಸಿದ್ದು ಕೇವಲ 35 ರನ್​​. ಅದರಲ್ಲೂ ಕೇವಲ 2 ಸಿಕ್ಸರ್​​ ಮತ್ತು 1 ಫೋರ್​ ಬಾರಿಸಿದ್ದ. ಇದರ ಪರಿಣಾಮ 2024ರ ಐಪಿಎಲ್​ನಲ್ಲಿ ಹೆಚ್ಚು ಪಂದ್ಯಗಳಲ್ಲಿ ಅವಕಾಶ ಸಿಗಲಿಲ್ಲ. ಆಡಿದ ಒಂದು ಪಂದ್ಯದಲ್ಲಿ ಕೇವಲ 24 ರನ್​ ಗಳಿಸಿದ್ದ. ಅದು ಅಷ್ಟು ಇಂಪ್ಯಾಕ್ಟ್​ ಇನ್ನಿಂಗ್ಸ್​ ಆಗಿರಲಿಲ್ಲ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಈ ಸಲ ಕಪ್​ ಗೆಲ್ಲಲೇಬೇಕು ಎಂದು ಮುಂದಾಗಿದೆ. ಹೀಗಾಗಿ ಬಲಿಷ್ಠ ಟೀಮ್​ ಕಟ್ಟಲು ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದೆ. ಇದರ ಪರಿಣಾಮ ಸುಯಾಶ್​ಗೆ ಕೊಕ್​ ನೀಡುವುದು ಪಕ್ಕಾ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow