Bigg Boss: ಬಿಗ್ ಬಾಸ್ ಮುಂದಿನ ಸೀಸನ್ ಹೋಸ್ಟ್‌ ಮಾಡೋದು ಯಾರು? ಇವರೇ ಫಿಕ್ಸಾ?

ಜನವರಿ 29, 2025 - 20:01
 0  13
Bigg Boss: ಬಿಗ್ ಬಾಸ್ ಮುಂದಿನ ಸೀಸನ್ ಹೋಸ್ಟ್‌ ಮಾಡೋದು ಯಾರು? ಇವರೇ ಫಿಕ್ಸಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಅಂತ್ಯ ಕಂಡಿದೆ. ವೀಕ್ಷಕರು ಅಂದುಕೊಂಡತೆ ಹನುಮಂತ ಗೆದ್ದು ಬೀಗಿದ್ದಾನೆ. ಇತ್ತ ತ್ರಿವಿಕ್ರಮ್ ಅಭಿಮಾನಿಗಳಿಗೆ ಬೇಸರ ಆಗಿದ್ದರೂ, ರನ್ನರ್ ಅಪ್ ಆಗಿದ್ದಕ್ಕೆ ಖುಷಿಯಾಗಿದ್ದಾರೆ. ಎಲ್ಲ ಖುಷಿ ಖುಷಿಯಾಗಿರುವಾಗಲೇ ಕಿಚ್ಚ ಸುದೀಪ್ ಅಭಿಮಾನಿಗಳು ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೇನು ಕಾರಣ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕಿಚ್ಚ ಸುದೀಪ್‌ ಅವರ ಬಳಿಕ ಯಾರು ನಿರೂಪಣೆ ಮಾಡ್ತಾರೆ ಎನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ. ವೀಕೆಂಡ್‌ ವಿತ್‌ ರಮೇಶ್‌ ನಡೆಸಿಕೊಟ್ಟಿದ್ದ ರಮೇಶ್‌ ಅವರು ಹೋಸ್ಟ್‌ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಮೆಶ್‌ ಅವರು ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ" ಎಂದು ಹೇಳಿದ್ದರು.,,ರಮೇಶ್‌ ಅರವಿಂದ್‌, ಡಾ.ಶಿವರಾಜ್‌ ಕುಮಾರ್‌, ರಿಯಲ್‌ ಸ್ಟಾರ್‌ ಉಪೇಂದ್ರ, ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹೆಸರು ಮುಂದಿದೆ ಎನ್ನಲಾಗುತ್ತಿದೆ. ಅದರಲ್ಲೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಪಕ್ಕಾ ಮುಂದಿನ ಬಾರಿ ನಿರೂಪಣೆ ಎಂಬ ಮಾತುಗಳು ಕೇಳಿ ಬಂದಿದ್ದವು. ರಮೇಶ್‌ ಅವರನ್ನು ಹೊರತುಪಡಿಸಿ, ಅವರ ನಂತರ ಕೇಳಿ ಬಂದ ಹೆಸರು ಶಿವಣ್ಣ ಅವರದ್ದು.

ಯಶ್‌ ಅವರು ಕೂಡ ಬಿಗ್‌ ಬಾಸ್‌ ಹೋಸ್ಟ್‌ ಆಗಬಹುದು ಎನ್ನಲಾಗುತ್ತಿದೆ. ಆದರೆ ಸದ್ಯ ನಟ ಟಾಕ್ಸಿಕ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಿಷಬ್ ಶೆಟ್ಟಿ. ಇವರಿಗೆ ಬಿಗ್‌ ಬಾಸ್‌ ಅದಾಗಲೇ ಆಫರ್‌ ನೀಡಿದೆ ಎನ್ನಲಾಗುತ್ತಿದೆ. ಬಹುತೇಕರು ರಿಷಬ್‌ ಅವರೇ ಸೂಕ್ತ ಎಂದೂ ಹೇಳುತ್ತಿದ್ದಾರೆ

ಇನ್ನು ಈಗಾಗಲೇ ತಮಿಳಿನಲ್ಲಿ ವಿಜಯ್‌ ಸೇತುಪತಿ ಅವರು ನಿಭಾಯಿಸಿ ಗೆದ್ದಿದ್ದಾರೆ. ಹಾಗಾಗಿ ಕನ್ನಡದಲ್ಲೂ ಸಕ್ಸೆಸ್‌ ಆಗಬಹುದು ಅಥವಾ ಕಿಚ್ಚ ಸುದೀಪ್‌ ಮತ್ತೆ ಮರಳಲೂ ಬಹುದು ಎಂಬ ಮಾತುಗಳೂ ಇವೆ. ಆದರೆ ರಿಷಬ್‌ ಶೆಟ್ಟಿ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.

ರಿಷಬ್‌ ಸದ್ಯ ಕಾಂತಾರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ 2022ರಲ್ಲಿ ಥಿಯೇಟರ್‌ಗಳಿಗೆ ಬಂದಾಗ, ಇದು ವರ್ಷದ ಅತಿದೊಡ್ಡ ಹಿಟ್‌ಗಳಲ್ಲಿ ಒಂದಾಗಿದೆ ಎಂದು ಸಾಬೀತಾಯಿತು. ರಿಷಬ್ ಶೆಟ್ಟಿ ಅವರ ಚಲನಚಿತ್ರವು ಭಾರತೀಯ ಸಂಸ್ಕೃತಿಯನ್ನು ರೋಮಾಂಚನಕಾರಿ ಮತ್ತು ಅಭೂತಪೂರ್ವ ರೀತಿಯಲ್ಲಿ ಪ್ರದರ್ಶಿಸುವ ಮೂಲಕ ವಿಶ್ವದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ.

ಸದ್ಯ ಕಾಂತಾರ 2 ಗಾಗಿ ಕಾಯುತ್ತಿದ್ದಾರೆ ಫ್ಯಾನ್ಸ್‌. ಈ ಸಿನಿಮಾಗೆ ನಟ ರಿಷಬ್‌ ಅವರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿನ ಯುದ್ಧದ ಸೀಕ್ವೆನ್ಸ್‌ಗಾಗಿ ವ್ಯಾಪಕವಾಗಿ ತಯಾರಿ ನಡೆಸುತ್ತಿದ್ದಾರೆ ಎಂಬುದು ಈಗ ಬಹಿರಂಗವಾಗಿದೆ. ವರದಿಯ ಪ್ರಕಾರ, ಅವರು ಈ ಯುದ್ಧದ ಸೀಕ್ವೆನ್ಸ್‌ ಚಿತ್ರೀಕರಣಕ್ಕಾಗಿ ತಿಂಗಳುಗಟ್ಟಲೆ ಕುದುರೆ ಸವಾರಿ ಮತ್ತು ಕತ್ತಿವರಸೆಯನ್ನು ಕಲಿತಿದ್ದಾರೆ ಎಂದು ವರದಿಯಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow