ಗ್ರೇಟರ್ ಬೆಂಗಳೂರು ಚುನಾವಣೆಗೆ ಬಿಜೆಪಿ ಸಿದ್ದತೆ: 11 ಸಂಯೋಜಕರನ್ನು ನೇಮಕ

ಅಕ್ಟೋಬರ್ 24, 2025 - 22:07
 0  6
ಗ್ರೇಟರ್ ಬೆಂಗಳೂರು ಚುನಾವಣೆಗೆ ಬಿಜೆಪಿ ಸಿದ್ದತೆ: 11 ಸಂಯೋಜಕರನ್ನು ನೇಮಕ

ಬೆಂಗಳೂರು: ಗ್ರೇಟರ್ ಬೆಂಗಳೂರು ರಚನೆಯ ನಂತರ ನಡೆಯಲಿರುವ ಅಧಿಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಪಕ್ಷ ಸಂಘಟನೆಯನ್ನು ಬಲಪಡಿಸುವ ಕಾರ್ಯಕ್ಕೆ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 11 ಮಂದಿ ಸಂಯೋಜಕರ ನೇಮಕಾತಿ ಅನುಮೋದಿಸಲಾಗಿದೆ.

ಸಂಯೋಜಕರ ತಂಡ:
ಬಿಜೆಪಿಯ ಸಂಘಟನಾ ಬಲವರ್ಧನೆಗೆ ಆಯ್ಕೆಯಾದ ಸಂಯೋಜಕರ ಪಟ್ಟಿಯಲ್ಲಿ ಪ್ರಮುಖ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಸ್ಥಾನ ಪಡೆದಿದ್ದಾರೆ. ಗ್ರೇಟರ್ ಬೆಂಗಳೂರಿನ ಐದು ಪಾಲಿಕೆಗಳಿಗೆ ಸಂಘಟನಾತ್ಮಕ ಸಂಯೋಜಕರನ್ನು ನೇಮಕ ಮಾಡಲಾಗಿದೆ:

  • ಬೆಂಗಳೂರು ದಕ್ಷಿಣ: ಎಸ್.ಕೆ. ರಾಮಮೂರ್ತಿ

  • ಬೆಂಗಳೂರು ಉತ್ತರ: ಎನ್. ಹರೀಶ್

  • ಬೆಂಗಳೂರು ಕೇಂದ್ರ: ಎ.ಆರ್. ಸಪ್ತಗಿರಿ ಗೌಡ

  • ಬೆಂಗಳೂರು ಪೂರ್ವ: ಎಂ.ಟಿ.ಬಿ. ನಾಗರಾಜ್ ಮತ್ತು ಕೆ.ಎಸ್. ನವೀನ್

  • ಬೆಂಗಳೂರು ಉತ್ತರ: ಮುನಿರತ್ನ ಮತ್ತು ಭಾರತಿ ಶೆಟ್ಟಿ

  • ಬೆಂಗಳೂರು ದಕ್ಷಿಣ: ಬೈರತಿ ಬಸವರಾಜ ಮತ್ತು ಎನ್. ರವಿಕುಮಾರ್

  • ಬೆಂಗಳೂರು ಕೇಂದ್ರ: ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಡಿ.ಎಸ್. ಅರುಣ್

  • ಬೆಂಗಳೂರು ಪಶ್ಚಿಮ: ನಾರಾಯಣ ಸ್ವಾಮಿ, ಕೆ. ಗೋಪಾಲಯ್ಯ ಮತ್ತು ಅಶ್ವಥ್ ನಾರಾಯಣ

 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚುನಾವಣಾ ತಯಾರಿಗಳನ್ನು ವಿವರವಾಗಿ ಚರ್ಚಿಸಿದ್ದಾರೆ. ಸಭೆಯಲ್ಲಿ ಯಾರಿಗೆ ಯಾವ ರೀತಿಯ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂಬ ವಿಚಾರವನ್ನೂ ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಲಾಗಿದೆ.

ಗ್ರೇಟರ್ ಬೆಂಗಳೂರು ರಚನೆಯೊಂದಿಗೆ ನಗರದ ಆಡಳಿತ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗಳಾಗಲಿವೆ. ಹೊಸ ಅಧಿಕಾರ ರಚನೆಗೆ ನಡೆಯಲಿರುವ ಚುನಾವಣೆಗಳು ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow