ನಿಮಗೆ ಶುಗರ್ ಇದ್ಯಾ? ಬೆಳಗ್ಗೆ ಎದ್ದ ತಕ್ಷಣ ಈ ತರಕಾರಿ ತಿನ್ನಿ ದಿನಪೂರ್ತಿ ಕಂಟ್ರೋಲ್’ನಲ್ಲಿ ಇರುತ್ತೆ!

ಜೂನ್ 24, 2025 - 07:02
 0  12
ನಿಮಗೆ ಶುಗರ್ ಇದ್ಯಾ? ಬೆಳಗ್ಗೆ ಎದ್ದ ತಕ್ಷಣ ಈ ತರಕಾರಿ ತಿನ್ನಿ ದಿನಪೂರ್ತಿ ಕಂಟ್ರೋಲ್’ನಲ್ಲಿ ಇರುತ್ತೆ!

 

ಪ್ರಸ್ತುತ ದಿನಗಳಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಸಮಸ್ಯೆ ಇರುವವರು ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ, ಸಕ್ಕರೆ ಹೆಚ್ಚಾಗುವ ಅಪಾಯವಿದೆ. ಅಧಿಕ ರಕ್ತದ ಸಕ್ಕರೆ, ಅಥವಾ ಹೈಪರ್ಗ್ಲೈಸೀಮಿಯಾ, ಮಧುಮೇಹ,

 ಹೃದ್ರೋಗ, ಮತ್ತು ನರಗಳ ಹಾನಿ ಸೇರಿದಂತೆ ಇತರೆ ಸಮಸ್ಯೆಗಳನ್ನು ನಿರ್ವಹಿಸದೆ ಬಿಟ್ಟರೆ ಗಂಭೀರವಾದ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು. ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರ ಮತ್ತು ವ್ಯಾಯಾಮದಂತಹ ಜೀವನಶೈಲಿಯ ಬದಲಾವಣೆಗಳು ಅತ್ಯಗತ್ಯವಾದರೂ, ಸೌತೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಸೌತೆಕಾಯಿ ಮಧುಮೇಹಿಗಳಿಗೆ ಎಷ್ಟು ಸಹಕಾರಿ?

* ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೂತ್ರ ವಿಸರ್ಜನೆಯ ಸಮಸ್ಯೆಯೂ ಹೆಚ್ಚಾಗಿ ಕಾಡುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಹೀಗಾಗಿ ಸೌತೆಕಾಯಿಯಲ್ಲಿ ನಿಯಮಿತವಾದ ಸೇವನೆಯೂ ದೇಹದಲ್ಲಿನ ನೀರಿನ ಕೊರತೆಯನ್ನು ನೀಗಿಸುತ್ತದೆ.

* ಸಾಮಾನ್ಯವಾಗಿ ತೂಕ ಹೆಚ್ಚಾಗುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಸೌತೆಕಾಯಿಯನ್ನು ಸೇವಿಸುವುದರಿಂದ ಬೊಜ್ಜು ನಿವಾರಣೆಯಾಗಿ ತೂಕವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ದೇಹದಲ್ಲಿ ಬೊಜ್ಜು ಹೆಚ್ಚಾದರೆ ಸಕ್ಕರೆ ಕಾಯಿಲೆ ಬರುವ ಸಾಧ್ಯತೆಯಿದ್ದು, ತರಕಾರಿಯೂ ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ.

* ಸೌತೆಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಇದರ ನಿಯಮಿತ ಸೇವನೆಯೂ ದೇಹಕ್ಕೆ ಶಕ್ತಿಯನ್ನು ನೀಡುವುದರೊಂದಿಗೆ ದೀರ್ಘಕಾಲದ ಕಾಯಿಲೆಗಳ ಅಪಾಯ ಮಟ್ಟವನ್ನು ಕಡಿಮೆ ಮಾಡುತ್ತದೆ.

* ಸೌತೆಕಾಯಿಯಲ್ಲಿ ಫೈಬರ್ ಪ್ರಮಾಣವು ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಆಹಾರವನ್ನು ಜೀರ್ಣಗೊಳಿಸಿ ಹೊಟ್ಟೆಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತದೆ.

* ಮದುಮೇಹಿಗಳಲ್ಲಿ ಕಣ್ಣಿನ ಸಮಸ್ಯೆಯೂ ಹೆಚ್ಚಿರುತ್ತದೆ. ಆದರೆ ಸೌತೆಕಾಯಿಯಲ್ಲಿ ವಿಟಮಿನ್ ಸಮೃದ್ಧವಾಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಕಣ್ಣಿನ ದೃಷ್ಟಿ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow