ಬಿಗ್ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್ ತಾಯಿ: ಭವ್ಯಾಗೌಡ ಬಗ್ಗೆ ಹೇಳಿದ್ದೇನು?

ಡಿಸೆಂಬರ್ 31, 2024 - 20:04
 0  9
ಬಿಗ್ ಮನೆಗೆ ಭೇಟಿ ಕೊಟ್ಟ ತ್ರಿವಿಕ್ರಮ್ ತಾಯಿ: ಭವ್ಯಾಗೌಡ ಬಗ್ಗೆ ಹೇಳಿದ್ದೇನು?

ಬಿಗ್ ಬಾಸ್​ ಸೀಸನ್​ 11 ಇನ್ನು ಕೆಲವು ದಿನಗಳು ಮಾತ್ರ ಇರಬಹುದು, ಏಕೆಂದರೆ 100 ದಿನಗಳ ಸಮೀಪಕ್ಕೆ ಬಂದಿದೆ. ಈ ಬಾರಿ ಗೆಲ್ಲುವ ಸ್ಪರ್ಧಿ ಯಾರು ಎನ್ನುವುದು ಮಾತ್ರ ಎಲ್ಲರಲ್ಲೂ ಮೂಡಿರುವ ಕುತೂಹಲವಾಗಿದೆ. ಅದರಂತೆ ಮನೆಯಲ್ಲಿ ಹೊಸ ಹೊಸ ಟಾಸ್ಕ್​ ನೀಡಲಾಗುತ್ತಿದ್ದು ಸ್ಪರ್ಧಿಗಳು ಅಷ್ಟೇ ಸೊಗಸಾಗಿ ಟಾಸ್ಕ್ ಪೂರ್ಣಗೊಳಿಸುತ್ತಿದ್ದಾರೆ.

ಮುಂದಿನ ನಾಲ್ಕು ವಾರಗಳಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ ತೆರೆಬೀಳಲಿದೆ. ಇದೀಗ ಇದೇ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಅದೂ ಸರ್ಪ್ರೈಸ್‌ ರೀತಿಯಲ್ಲಿ.

90 ದಿನಗಳ ಮೇಲಾದರೂ ಸ್ಪರ್ಧಿಗಳ ಕುಟುಂಬದವರು ಬಿಗ್‌ಬಾಸ್‌ ಮನೆಗೆ ಬಂದಿಲ್ಲ. ಇದೀಗ ಒಬ್ಬೊಬ್ಬರ ಆಗಮನವಾಗುತ್ತಿದೆ. ಕಲರ್ಸ್‌ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಬಿಗ್‌ ಮನೆಗೆ ಸ್ಪರ್ಧಿಗಳ ಹೆತ್ತವರ ಆಗಮನವಾಗಿದೆ. ಮೊದಲಿಗೆ ಮುಖ್ಯ ದ್ವಾರದಿಂದ ಭವ್ಯಾ ಗೌಡ ಅವರ ತಾಯಿ ಆಗಮಿಸಿದರೆ, ಬಳಿಕ ತ್ರಿವಿಕ್ರಮ್‌ ಅವರ ತಾಯಿಯೂ ಆಗಮಿಸಿದ್ದಾರೆ. ಅಮ್ಮನ ಆಗಮನವಾಗುತ್ತಿದ್ದಂತೆ, ನಿಂತಲ್ಲಿಂದಲೇ ಇವರಿಬ್ಬರ ಕಣ್ಣಾಲಿಗಳಲ್ಲಿ ನೀರು ಜಿನುಗಿದೆ. ಆದರೆ, ಸ್ಪರ್ಧಿಗಳಿಗೆ ಅಮ್ಮನ ಭೇಟಿಗಾಗಿ ಒಂದು ಟ್ವಿಸ್ಟ್‌ ಕೊಟ್ಟಿದ್ದಾರೆ.

ಎಲ್ಲರೂ Pause ಎಂದು ಬಿಗ್‌ಬಾಸ್‌ ಹೇಳಿದ್ದಾರೆ. 10 ನಿಮಿಷದ ಒಳಗೆ ಪಜಲ್‌ ಪೂರ್ಣಗೊಳಿಸಿದರೆ ಮಾತ್ರ ಅಮ್ಮನ ಭೇಟಿಗೆ ಅವಕಾಶ ಎಂದಿದ್ದಾರೆ. ಅಮ್ಮನ ಫೋಟೋ ತುಣುಕುಗಳ ಪಜಲ್‌ಅನ್ನು ಪೂರ್ಣಗೊಳಿಸಿದ ಭವ್ಯಾಗೆ ಭೇಟಿಯ ಅವಕಾಶ ಸಿಕ್ಕಿದೆ. ಆದರೆ, ತ್ರಿವಿಕ್ರಮ್ 10 ನಿಮಿಷದಲ್ಲಿ ಪಜಲ್‌ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇನ್ನೊಂದು ಚಾನ್ಸ್‌ ಕೊಡಿ ಎಂದು ಅಂಗಲಾಚಿದ್ದಾರೆ. ಸಮಯ ಮುಗಿದ ಹಿನ್ನೆಲೆಯಲ್ಲಿ ಮುಖ್ಯದ್ವಾರದಿಂದ ತ್ರಿವಿಕ್ರಮ್‌ ತಾಯಿ ಹೊರ ನಡೆದಿದ್ದಾರೆ.

ಭವ್ಯಾ ಗೌಡ ಮತ್ತು ತ್ರಿವಿಕ್ರಮ್‌ ಬಿಗ್‌ ಬಾಸ್‌ ಮನೆಯಲ್ಲಿ ತುಂಬ ಆಪ್ತರಾಗಿದ್ದಾರೆ. ಭವ್ಯಾ ಸೋತಾಗ ತ್ರಿವಿಕ್ರಂ ಸ್ಫೂರ್ತಿ ತುಂಬಿದ್ದಾರೆ. ಟಾಸ್ಕ್‌ ಮಾತ್ರವಲ್ಲದೆ, ಬಿಗ್‌ ಬಾಸ್‌ ಮನೆಯಲ್ಲಿನ ಪ್ರತಿ ಏರಿಳಿತಗಳ ಬಗ್ಗೆಯೂ ಭವ್ಯಾ ಜತೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇತ್ತ ತಮ್ಮ ಇಷ್ಟ- ಕಷ್ಟಗಳೆಲ್ಲವನ್ನೂ ತ್ರಿವಿಕ್ರಂ ಬಳಿ ಹೇಳಿಕೊಂಡಿದ್ದಾರೆ ಭವ್ಯಾ. ಮನೆ ಮಂದಿ ಮಾತ್ರವಲ್ಲದೆ, ಹೊರಗಡೆಯ ವೀಕ್ಷಕರೂ ಈ ಜೋಡಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಬಿಗ್‌ ಮನೆಗೆ ಬಂದ ವಿಕ್ರಂ ತಾಯಿಯೂ ಹೊರಗಿನ ವೀಕ್ಷಕರ ಅಭಿಪ್ರಾಯವನ್ನೇ ಭವ್ಯಾ ಮುಂದೆ ಹೇಳಿದ್ದಾರೆ.

ಭವ್ಯಾ ಗೌಡ ಅವರ ಬಳಿ ಬಂದು ಮಾತಿಗಿಳಿದ ತ್ರಿವಿಕ್ರಮ್‌ ಅವರ ತಾಯಿ, "ನನ್ನ ಮಗನ ತಾಯಿಯಾಗಿ, ಫ್ರೆಂಡ್‌ ಆಗಿ ಎಲ್ಲ ಥರದಲ್ಲಿಯೂ ಜತೆಗಿದ್ದೀಯಾ. ರಾಧಾ ಕೃಷ್ಣನ ಥರ ಇದ್ದೀರಾ ಎಂದು ಹೇಳಿದ್ದಾರೆ.,

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow