ಮ್ಯಾಕ್ಸ್ ನಡುವೆಯೂ UI ಆರ್ಭಟ: 10 ದಿನದಲ್ಲಿ ಕಲೆಕ್ಷನ್ ಮಾಡಿದ ಹಣ ಎಷ್ಟು..?

ಉಪೇಂದ್ರ ಅವರು ನಟಿಸಿ ನಿರ್ದೇಶಿಸಿರುವ UI ಸಿನಿಮಾ ಭರ್ಜರಿ ಪ್ರದರ್ಶನ ಆಗುತ್ತಿದ್ದು, ಉಪ್ಪಿ ಅಭಿಮಾನಿಗಳು ಇಷ್ಟ ಪಟ್ಟು ಚಿತ್ರ ನೋಡುತ್ತಿದ್ದಾರೆ.
ಯುಐ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರೇ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ನಿರ್ದೇಶನ, ನಟನೆ ಈ ಎರಡಕ್ಕೂ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಥೆ ಅರ್ಥ ಆಗುತ್ತಿಲ್ಲ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇದಕ್ಕೆ ಅರ್ಥ ಆಗಿಲ್ಲ ಎಂದರೆ 2ನೇ ಬಾರಿ ಹೋಗಿ ಎಲ್ಲನೂ ಚೆನ್ನಾಗಿ ಅರ್ಥ ಆಗುತ್ತದೆ ಎಂದು ಉಪೇಂದ್ರ ಅವರು ಹೇಳುತ್ತಿದ್ದಾರೆ.
ಯುಐ ಸಿನಿಮಾ ಎರಡನೇ ಸಲ ನೋಡಿದರೆ ಪಕ್ಕಾ ಚೆನ್ನಾಗಿ ಅರ್ಥ ಆಗುತ್ತದೆ. ಮೊದಲ ಸಲ ಅರ್ಥ ಆಗಿಲ್ಲ ಎಂದರೆ ಎರಡನೇ ಸಲ ನೋಡಬಹುದು. ಏಕೆಂದರೆ ಸಿನಿಮಾದಲ್ಲಿ ಪ್ರತಿ ದೃಶ್ಯವನ್ನು ತುಂಬಾನೆ ಯೋಚಿಸಿ.. ಯೋಚಿಸಿ ಪ್ಲಾನ್ ಮಾಡಿ ಜೋಡಿಸಲಾಗಿದೆ. ಇನ್ನೊಮ್ಮೆ ನೋಡಿದರೆ ನೀಟ್ ಆಗಿಯೇ ಅರ್ಥ ಆಗುತ್ತದೆ. ಇದರಲ್ಲಿ ಅರ್ಥ ಆಗದೇ ಇರೋದು ಏನು ಇಲ್ಲ ಎಂದು ಉಪ್ಪಿ ಅಭಿಮಾನಿಗಳಿಗೆ ಹೇಳಿದ್ದಾರೆ.
ಇನ್ನು ಯುಐ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬಿಡುಗಡೆಯಾದ 10 ದಿನಗಳಲ್ಲಿ 33 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 35 ಕೋಟಿ ಗಳಿಕೆಯನ್ನು ಯುಐ ಗಳಿಸಿದೆ. ಇನ್ನು ಸಿನಿಮಾ ಥಿಯೇಟರ್ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಹಣ ಸಂಗ್ರಹ ಮಾಡುವ ನಿರೀಕ್ಷೆ ದುಪ್ಪಟ್ಟು ಆಗಿ
ನಿಮ್ಮ ಪ್ರತಿಕ್ರಿಯೆ ಏನು?






