Sumalatha Ambareesh: ಅಂಬಿ ಮೊಮ್ಮಗನ ಹೆಸರೇನು ಗೊತ್ತಾ..? ಸುಮಲತಾ ಇಟ್ಟಿರುವ ಹೆಸರಿಗೆ ಫ್ಯಾನ್ಸ್ ಖುಷ್

ಮಾರ್ಚ್ 16, 2025 - 14:00
 0  33
Sumalatha Ambareesh: ಅಂಬಿ ಮೊಮ್ಮಗನ ಹೆಸರೇನು ಗೊತ್ತಾ..? ಸುಮಲತಾ ಇಟ್ಟಿರುವ  ಹೆಸರಿಗೆ ಫ್ಯಾನ್ಸ್ ಖುಷ್

ಇಂದು ಸುಮಲತಾ ಅವರ ಮೊಮ್ಮಗನ ನಾಮಕರಣ ಸಮಾರಂಭ ನಡೆದಿದ್ದು, ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಸೊಸೆ ಅವಿವಾ ಬಿದಪ್ಪ ಅವರು ಕೆಲ ತಿಂಗಳ ಹಿಂದಷ್ಟೆ ಗಂಡು ಮಗುವಿನ ಪೋಷಕರಾಗಿದ್ದು,

ಇಂದು ಮಗುವಿನ ನಾಮಕರಣ ಮಹೋತ್ಸವ ಇದೆ. ಖಾಸಗಿ ಹೋಟೆಲ್ನಲ್ಲಿ ಮಗುವಿನ ನಾಮಕರ ಸಮಾರಂಭ ನಡೆದಿದ್ದು, ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ಅಪ್ಪನಹೆಸರಿಟ್ಟಿದ್ದಾರೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್ ಅನ್ನೋದಾಗಿತ್ತು. ಹಿನ್ನೆಲೆಯಲ್ಲಿ ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಮೊಮ್ಮಗನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.

2024 ನವೆಂಬರ್ 12ರಂದು ಅಭಿಷೇಕ್-ಅವಿವಾಗೆ ಗಂಡು ಮಗು ಜನಿಸಿತ್ತು. ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡೋ ಪ್ಲಾನ್ ಕುಟುಂಬಸ್ಥರಲ್ಲಿ ಇತ್ತು. ಅಂಬರೀಶ್ ಅವರ ಹೆಸರಿಡೋ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow