ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ನಿಮಗೂ ಆಸಕ್ತಿ ಇದ್ರೆ ಅಪ್ಲೈ ಮಾಡಿ!

ಜನವರಿ 1, 2025 - 08:04
 0  13
ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ನಿಮಗೂ ಆಸಕ್ತಿ ಇದ್ರೆ ಅಪ್ಲೈ ಮಾಡಿ!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿಯಿದ್ದು , ಕೆಲಸ ಹುಡುಕುತ್ತಿದ್ದರೆ ಅಂತಹವರಿಗಾಗಿಯೇ ಸುವರ್ಣವಕಾಶವೊಂದು ಒದಗಿ ಬಂದಿದೆ. ಇದೀಗ ಬ್ಯಾಂಕ್‌ ಆಫ್‌ ಬರೋಡಾ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿಸಲ್ಲಿಸ ಬಹುದಾಗಿದೆ. ಈ ಖಾಲಿಯಿರುವ ಹುದ್ದೆಗಳ ವಿವರ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿದಂತೆ ವಿವಿಧ ಮಾಹಿತಿಯು ಇಲ್ಲಿದೆ.

ಹೌದು, ತನ್ನಲ್ಲಿ ಖಾಲಿ ಇರುವ  1,267 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಆಫೀಸರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಮ್ಯಾನೇಜರ್‌, ಮ್ಯಾನೇಜರ್‌-ಸೇಲ್ಸ್‌ ಸೇರಿದಂತೆ ವಿವಿಧ ಹುದ್ದೆಗಳು ಖಾಲಿಯಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಪಾಸಾಗಿರುವ ಅಭ್ಯರ್ಥಿಗಳು ಜನವರಿ 17 ರೊಳಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
* ಇಲಾಖೆಯ ಹೆಸರು : ಬ್ಯಾಂಕ್ ಆಫ್ ಬರೋಡಾ

* ಹುದ್ದೆಗಳ ಹೆಸರು : ಸ್ಪೆಷಲಿಸ್ಟ್ ಆಫೀಸರ್, ಮ್ಯಾನೇಜರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಆಫೀಸರ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಮ್ಯಾನೇಜರ್‌, ಮ್ಯಾನೇಜರ್‌-ಸೇಲ್ಸ್‌ ಸೇರಿದಂತೆ ವಿವಿಧ ಹುದ್ದೆಗಳು .
* ಒಟ್ಟು ಹುದ್ದೆಗಳು : 1,267

ಅಭ್ಯರ್ಥಿಗೆ ಇರಬೇಕಾದ ವಿದ್ಯಾರ್ಹತೆ:
* ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ, ಬಿ.ಇ, ಬಿ.ಟೆಕ್‌, ಎಂಸಿಎ, ಎಂ.ಎಸ್‌ಸಿ, ಪಿಜಿಡಿಎಂ ಪೂರ್ಣಗೊಳಿಸಿರಬೇಕು.

ಅರ್ಜಿ ಶುಲ್ಕ
* ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು 600 ರೂ ಹಾಗೂ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ಹಾಗೂ ಮಹಿಳಾ ಅಭ್ಯರ್ಥಿಗಳು 100 ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 18 ಡಿಸೆಂಬರ್ 2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಜನವರಿ 2025

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow