ನಿಶ್ಚಿತಾರ್ಥ ಮಾಡಿಕೊಂಡ ‘ಬಿಗ್ ಬಾಸ್-8ರ ವಿನ್ನರ್ ಮಂಜು ಪಾವಗಡ: ಹುಡುಗಿ ಯಾರು!?

ಮಜಾಭಾರತ’, ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಹಾಸ್ಯ ಕಲಾವಿದ ಮಂಜು ಪಾವಗಡ ಅವರ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ನಂದಿನಿ ಎಂಬುವರ ಕೈಗೆ ಮಂಜು ಪಾವಗಡ ಉಂಗುರ ತೊಡಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ನಂದಿನಿ ಜೊತೆ ಸದ್ದಿಲ್ಲದೇ ನಟ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ನವೆಂಬರ್ 13 ಮತ್ತು 14ರಂದು ಪಾವಗಡದಲ್ಲಿ ಮದುವೆ ನಡೆಯಲಿದೆ.
ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






