Rajath-Vinay Gowda: ಮಚ್ಚು ಹಿಡಿದು ರೀಲ್ಸ್: ವಿನಯ್ ಗೌಡ, ರಜತ್ʼಗೆ ಬಿಗ್ ರಿಲೀಫ್‌ ಕೊಟ್ಟ ಕೋರ್ಟ್..!

ಮಾರ್ಚ್ 28, 2025 - 16:47
 0  10
Rajath-Vinay Gowda: ಮಚ್ಚು ಹಿಡಿದು ರೀಲ್ಸ್: ವಿನಯ್ ಗೌಡ, ರಜತ್ʼಗೆ ಬಿಗ್ ರಿಲೀಫ್‌ ಕೊಟ್ಟ ಕೋರ್ಟ್..!

ಬೆಂಗಳೂರು: ರೀಲ್ಸ್ ಮಾಡಿ ಜೈಲು ಸೇರಿದ ರಜತ್ ಹಾಗೂ ವಿನಯ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ವಿನಯ್​ ಗೌಡ ಹಾಗೂ ರಜತ್​ ಕಿಶನ್​ಗೆ ಷರತ್ತು ಬದ್ಧ ಜಾಮೀನು ಮಂಜೂರು ಕೋರ್ಟ್ ಆದೇಶ ನೀಡಿದೆ. ವಿಡಿಯೋನಲ್ಲಿ ವಿನಯ್ ಮತ್ತು ರಜತ್ ಇಬ್ಬರೂ ಸಹ ಮಚ್ಚೊಂದನ್ನು ಹಿಡಿದುಕೊಂಡಿದ್ದರು. ಇದೇ ಕಾರಣಕ್ಕೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಸಾಕ್ಷ್ಯ ನಾಶ ಪ್ರಕರಣದಡಿ ಇಬ್ಬರನ್ನೂ ಬಂಧಿಸಲಾಗಿತ್ತು. ಇದೀಗ ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.

24ನೇ ಎಸಿಜೆಎಂ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಿದೆ. ಇಬ್ಬರಿಗೂ ಸಹ ಷರತ್ತುಬದ್ಧ ಜಾಮೀನು ಮಂಜೂರಾಗಿದ್ದು, 10 ಸಾವಿರ ರೂಪಾಯಿ ಶೂರಿಟಿ ನೀಡುವ ಷರತ್ತನ್ನು ನ್ಯಾಯಾಲಯ ವಿಧಿಸಿದೆ. ಇಂದು ನಡೆದ ವಿಚಾರಣೆಯಲ್ಲಿ ಪೊಲೀಸರ ಪರ ವಾದ ಮಾಡಿದ ವಕೀಲ ಚಂದ್ರೇಗೌಡ ಅವರು, ಆರೋಪಿಗಳು ಸಾಕ್ಷ್ಯನಾಶ ಮಾಡಿದ್ದು ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು.

ಆದರೆ ಆರೋಪಿಗಳ ಪರ ವಾದ ಮಂಡಿಸಿದ ವಕೀಲ, ಸರ್ಚ್ ವಾರಂಟ್ ತೆಗೆದುಕೊಂಡು ಮನೆಯನ್ನೆಲ್ಲಾ ಸರ್ಚ್ ಮಾಡಿದ್ದಾರೆ, ಮುಂದೆ ಏನೇ ಇದ್ದರೂ ಸಹಕಾರ ನೀಡ್ತಾರೆ. ವಿನಯ್ ಗೆ ಭಾನುವಾರ ಶೂಟಿಂಗ್ ಸಹ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಅವರು ಚಿತ್ರೀಕರಣದಲ್ಲಿ ಭಾಗಿ ಆಗಬೇಕಾದ ಅವಶ್ಯಕತೆ ಇದೆ. ಅವರಿಗೆ ಕಣ್ಣಿನ ಸಮಸ್ಯೆಯೂ ಇದೆ. ಹೀಗಾಗಿ ಬೇಲ್ ನೀಡಬೇಕೆಂದು ವಿನಯ್ ಪರ ವಕೀಲರ ಮನವಿ ಮಾಡಿದರು.

ಈ ವೇಳೆ ನ್ಯಾಯಾಧೀಶರು, ಶೂಟಿಂಗ್​ನಲ್ಲಿ ಮಚ್ಚು ಹಿಡಿದರೆ ಏನು ಮಾಡೋದು ಎಂದು ಕೇಳಿದರು. ಅದಕ್ಕೆ ವಕೀಲರು, ಕನಸಿನಲ್ಲಿಯೂ ಹಾಗೆ ಮಾಡೊಲ್ಲ, ಜಾಮೀನು ಮಂಜೂರು ಮಾಡಿ ಎಂದು ಮನವಿ ಮಾಡಿದರು. ಪೊಲೀಸರು ಸಹ ತಮಗೆ ವಿನಯ್ ಮತ್ತು ರಜತ್ ಅವರ ಕಸ್ಟಡಿಯ ಅವಶ್ಯಕತೆ ಇಲ್ಲವೆಂದು ಹೇಳಿದರು. ಹಾಗಾಗಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow