ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಮಾಜಿ ಸಂಸದನ ಮುಂದಿರುವ ಆಯ್ಕೆಗಳೇನು..?

ಆಗಸ್ಟ್ 2, 2025 - 18:18
 0  60
ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಮಾಜಿ ಸಂಸದನ ಮುಂದಿರುವ ಆಯ್ಕೆಗಳೇನು..?

 

ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೆಡಿಎಸ್‌ನ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿಯಾಗಿದ್ದಾರೆ ಎಂಬ ತೀರ್ಪನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. ತೀವ್ರ ಕುತೂಹಲ ಮೂಡಿಸಿದ್ದ ಈ ಪ್ರಕರಣಕ್ಕೆ ಕೊನೆಗೂ ನ್ಯಾಯಾಲಯವು ಜೀವನಪರ್ಯಂತ ಜೈಲು ಶಿಕ್ಷೆ ಹಾಗೂ ದಂಡದ ತೀರ್ಪು ನೀಡಿದೆ.

IPC ಸೆಕ್ಷನ್ 376(2)(N) ಅಡಿಯಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸೆಕ್ಷನ್ 376(2)(K) ಅಡಿಯಲ್ಲಿ 5 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ, ಮತ್ತು ಸೆಕ್ಷನ್ 376(2)(N) ಅಡಿಯಲ್ಲಿ ಮತ್ತೊಂದು 5 ಲಕ್ಷ ರೂ. ದಂಡ ವಿಧಿಸಲಾಗಿದೆ.

ನ್ಯಾಯಾಲಯದ ಆದೇಶದ ಪ್ರಕಾರ, ಈ ದಂಡದ ಮೊತ್ತದಿಂದ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸೂಚಿಸಲಾಗಿದೆ. ಈ ತೀರ್ಪು ಪ್ರಜ್ವಲ್ ರೇವಣ್ಣ ಪಾಲಿಗೆ ಭಾರೀ ಪೆಟ್ಟಾಗಿ ಪರಿಣಮಿಸಿದೆ. ಅವರು ಜೀವನಪರ್ಯಂತ ಜೈಲಿನಲ್ಲಿ ಉಳಿಯಬೇಕಿದೆ.

ಮುಂದಿನ ಹಂತಗಳಲ್ಲಿ ಪ್ರಜ್ವಲ್ ರೇವಣ್ಣ ಏನು ಮಾಡಬಹುದು?

  1. ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು:
    ವಿಶೇಷ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಬಹುದಾಗಿದೆ.

  2. ತಡೆಯಾಜ್ಞೆಿಗಾಗಿ ಮನವಿ:
    ಹೈಕೋರ್ಟ್, ವಿಶೇಷ ಕೋರ್ಟ್‌ನ ತೀರ್ಪು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡುವ ಸಾಧ್ಯತೆ ಇದೆ.
    ಹೀಗಾದರೆ, ತಾತ್ಕಾಲಿಕವಾಗಿ ಜೈಲಿನಿಂದ ರಿಲೀಸ್ ಆಗುವ ಅವಕಾಶ ಸಿಗಬಹುದು.

  3. ಇನ್ನೂ ಮೂರು ಪ್ರಕರಣಗಳ ವಿಚಾರಣೆ ಬಾಕಿ:
    ಉಳಿದ ಮೂರು ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತೀರ್ಪು ಬಾಕಿಯಿದ್ದು,
    ಈ ಪ್ರಕರಣಗಳಲ್ಲಿ ಪ್ರಜ್ವಲ್ ನಿರಪರಾಧಿ ಎಂಬುದು ಸಾಬೀತಾದರೆ ಮಾತ್ರ ಸಂಪೂರ್ಣ ರೀಲೀಫ್ ಸಾಧ್ಯ.

  4. ಸುಪ್ರೀಂ ಕೋರ್ಟ್ ಪರ್ಯಂತ ಹೋರಾಟ:
    ಹೈಕೋರ್ಟ್ ತೀರ್ಪು ಪ್ರತಿಕೂಲವಾದರೂ, ಸುಪ್ರೀಂ ಕೋರ್ಟ್ ಗೆ ಹೋಗುವ ಅವಕಾಶ ಇದೆ.
    ಆದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಇಬ್ಬರೂ ತೀರ್ಪನ್ನು ಎತ್ತಿ ಹಿಡಿದರೆ,
    ಪ್ರಜ್ವಲ್ ರೇವಣ್ಣಗೆ ಜೀವಾವಧಿಯ ಜೈಲು ಶಿಕ್ಷೆ ಖಚಿತ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow