ಹೊಸ ಟ್ವಿಸ್ಟ್​ ಪಡೆದುಕೊಂಡ ಅಮೃತಾಧಾರೆ ಸೀರಿಯಲ್: ಭೂಮಿಕಾ ಮುಂದೆ ಶಕುಂತಲಾ ಅಸಲಿ ಮುಖ ಬಯಲು!

ಎಪ್ರಿಲ್ 17, 2025 - 17:59
 0  14
ಹೊಸ ಟ್ವಿಸ್ಟ್​ ಪಡೆದುಕೊಂಡ  ಅಮೃತಾಧಾರೆ ಸೀರಿಯಲ್: ಭೂಮಿಕಾ ಮುಂದೆ ಶಕುಂತಲಾ ಅಸಲಿ ಮುಖ ಬಯಲು!

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಸೀರಿಯಲ್ ಜನಮನ್ನಣೆ ಪಡೆದಿದೆ. ರಾಜೇಶ್​ ನಟರಂಗ ಹಾಗೂ ಛಾಯಾ ಸಿಂಗ್​ ಅಭಿನಯಕ್ಕೆ ವೀಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. 

ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್​ನಲ್ಲಿ ಗೌತಮ್​ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಪ್ರತಿ ಹುಡುಗಿಗೂ ಮದುವೆ ಆಗೋ ಹುಡುಗನ ಬಗ್ಗೆ ಬೆಟ್ಟದಷ್ಟು ಕನಸು ಇರುತ್ತೆ. ವಿವಾಹ ನಂತರ ಹಾಗಿರ್ಬೇಕು. ಹೀಗ್​ ಇರ್ಬೇಕು ಅನ್ನೋ ಆಸೆ ಇರುತ್ತೆ. ಭೂಮಿ ಕೂಡ ಅಷ್ಟೇ ಪ್ರಿಯತಮನ ಬಗ್ಗೆ ಕಟ್ಟಿದ್ದ ಕನಸುಗಳನ್ನ ಡೈರಿಯಲ್ಲಿ ಬರೆದಿಟ್ಟಿರ್ತಾಳೆ. ಡೈರಿ ಓದಿದ್ದ ಡುಮ್ಮು ಸರ್​ ಪ್ರೀತಿಯ ಮಡದಿ ಕನಸನ್ನ ನನಸು ಮಾಡ್ತಿದ್ದಾರೆ. ಫಾರ್ಮಲ್ಸ್​ ಬಿಟ್ಟು ಕಾಲೇಜ್​ ಹುಡುಗನಂತೆ ಸಜ್ಜಾಗಿ ಭೂಮಿ ಜೊತೆ ರೋಮ್ಯಾಂಟಿಕ್​ ರೈಡ್​ ಹೊರಟಿದ್ದಾರೆ.

ಇನ್ನೂ, ಸೀರಿಯಲ್​ ಸ್ಟೋರಿಗೆ ಬರೋದಾದ್ರೇ, ಗೌತಮ್​ ತಾಯಿಗೆ ಹಳೆ ನೆನಪುಗಳು ಮರುಕಳಿಸಿವೆ. ಆದ್ರೆ ಶಕುಂತಲಾ ಕುತಂತ್ರಕ್ಕೆ ಕುಟುಂಬ ಸರ್ವನಾಶ ಆಗ್ಬಿಡುತ್ತೋ ಎಂಬ ಭಯದಲ್ಲೇ ಕಣ್ಮುಂದೆ ಇರೋ ಮಗ-ಮಗಳನ್ನ ಮುದ್ದಾಡೋಕೆ ಆಗ್ದೇ ತಾಯಿ ಜೀವ ಒದ್ದಾಡುತ್ತಿದೆ. 

ಮತ್ತೊಂದು ಕಡೆ ಭೂಮಿ ಧರಸಿದ್ದ ಸರಕ್ಕೆ ಮೈಕ್​ ಫಿಕ್ಸ್ ಮಾಡಿದ್ದಳು ಶಕುಂತಲಾ. ಈ ಸತ್ಯ ಬಯಲಾಗೋ ಸೂಚನೆ ಸಿಕ್ಕಿದ್ದು, ಭೂಮಿ ರಹಸ್ಯ ಕಾರ್ಯಾಚರಣೆ ಮಾಡ್ತಿದ್ದಾಳೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow