ಏನ್ ಕಿತ್ತುಕೊಳ್ತಾನೋ ಕಿತ್ತುಕೊಳ್ಳಲಿ: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಎಚ್ಚರಿಕೆ

ಜುಲೈ 29, 2025 - 19:29
 0  15
ಏನ್ ಕಿತ್ತುಕೊಳ್ತಾನೋ ಕಿತ್ತುಕೊಳ್ಳಲಿ: ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಎಚ್ಚರಿಕೆ

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ವಿರುದ್ಧ ನಟ ಪ್ರಥಮ್ ಪೊಲೀಸ್ ದೂರು ದಾಖಲಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಮತ್ತು ಅವರ ಅಭಿಮಾನಿಗಳಿಂದ ತಾನು ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದೇನೆ ಎಂದು ಆರೋಪಿಸಿದರು.

ಪ್ರಥಮ್ ಹೇಳುವಂತೆ, ದರ್ಶನ್ ಜೈಲಿನಲ್ಲಿ ಇದ್ದಾಗ ಅವರ ಬ್ಯಾರಕ್‌ನಲ್ಲಿದ್ದ ಕೈದಿಯೊಬ್ಬರು ತಮಗೆ ಶಸ್ತ್ರ ತೋರಿಸಿರುವುದಾಗಿ ಆರೋಪಿಸಿದರು. “ನಾನು ದೂರು ನೀಡಲು ನಿರ್ಧರಿಸಿದಾಗ ದರ್ಶನ್ ಹೇಳಿದಂತೆ, ಏನ್ ಕಿತ್ತುಕೊಳ್ತಾನೋ ಕಿತ್ತುಕೊಳ್ಳಲಿ. ಅವರಿಂದ ನಾನು ಏನು ಕಿತ್ತುಕೊಳ್ಳಬಲ್ಲೆ? ಅವರು ತಲೆಗೆ ವಿಗ್ ಹಾಕುತ್ತಾರೆ ಅಂತ ಮಾಧ್ಯಮಗಳಲ್ಲಿ ತೋರಿಸಿದ್ದಾರೆ," ಎಂದು ತೀವ್ರ ಗರಂ ಪ್ರದರ್ಶಿಸಿದ ನಟ ಪ್ರಥಮ್ ಆರೋಪಿಸಿದರು.

ಇದೇ ಸಂದರ್ಭದಲ್ಲಿ, ದರ್ಶನ್ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಗೆ ಬಂದು ನೇರವಾಗಿ ಹೇಳಿಕೆ ನೀಡುವವರೆಗೆ ತಾವು ಆಮರಣ ಉಪವಾಸ ಧರಣಿಗೆ ಕೂರುವುದಾಗಿ ಪ್ರಥಮ್ ಎಚ್ಚರಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow