ರೇಣುಕಾಸ್ವಾಮಿ ಕೊ*ಲೆಗೂ ಮುನ್ನ ಶೆಡ್ʼನಲ್ಲಿ ಫೋಟೋಗೆ ದರ್ಶನ್ ಪೋಸ್! “ದಾಸ”ನಿಗೆ ಮತ್ತೊಂದು ಸಂಕಷ್ಟ!

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಐದು ತಿಂಗಳ ಕಾಲ ಜೈಲಿನಲ್ಲಿದ್ದರು. ಮೂರು ವಾರಗಳ ಹಿಂದೆ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ಆರು ವಾರಗಳ ಮಧ್ಯಂತರ ಜಾಮೀನನ್ನು ತೆಗೆದುಕೊಳ್ಳಲಾಗಿತ್ತು. ಇದರ ಬೆನ್ನಲ್ಲೇ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು ರೇಣುಕಾಸ್ವಾಮಿ ಕೊಲೆಯಾದ ಸ್ಥಳದಲ್ಲೇ ಸಹಚರರ ಜೊತೆ ದರ್ಶನ್ ಫೋಟೋಗೆ ಪೋಸ್ ಕೊಟ್ಟಿದ್ರು. A6 ಜಗದೀಶ್, A7 ಅನುಕುಮಾರ್, A8 ರವಿಶಂಕರ್ ಜೊತೆ ತೆಗೆಸಿಕೊಂಡ ಫೋಟೋಗಳು ಸಿಕ್ಕಿವೆ. ಇವುಗಳನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಸೇರಿಸಿ ಕೋರ್ಟ್ಗೆ ನೀಡಿದ್ದಾರೆ.
ಪಟ್ಟಣಗೆರೆ ಶೆಡ್‌ನಲ್ಲೇ ಫೋಟೋ ತೆಗೆಸಿಕೊಂಡ ವಿಚಾರವನ್ನು ಪುನೀತ್ ಹಾಗೂ ಉಳಿದ ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ರು. ಆ ಫೋಟೋಗಳನ್ನ ಡಿಲೀಟ್ ಮಾಡಿದ್ದಾಗಿಯೂ ಪುನೀತ್ ಒಪ್ಪಿಕೊಂಡಿದ್ದ. ಹೀಗಾಗಿ ಪುನೀತ್ ಮೊಬೈಲ್ ಹೈದ್ರಾಬಾದ್ CSFLಗೆ ಕಳುಹಿಸಿ ಎಲ್ಲಾ ಪೋಟೋಗಳನ್ನ ರಿಟ್ರೀವ್ ಮಾಡಿಸಿದ್ದಾರೆ. ಇನ್ನು ಈ ಫೋಟೋಗಳು ದರ್ಶನ್ ಗೆ ಕಂಟಕವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






