ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬ: ಈ ಮಂತ್ರ ಪಠಿಸಿದರೆ ಐಶ್ವರ್ಯ, ಅದೃಷ್ಟ ನಿಮ್ಮದಾಗುತ್ತೆ!

ಶ್ರಾವಣ ಮಾಸವೆಂದರೆ ಹಬ್ಬಗಳ ಸಾಲು. ನಾಗರಪಂಚಮಿ ಮೊದಲ ಹಬ್ಬವಾದರೇ ಬಳಿಕ ಬರುವುದು ವರಮಹಾಲಕ್ಷ್ಮೀ ವ್ರತ. ಇದು ಹಿಂದೂಗಳ ಹಬ್ಬಗಳಲ್ಲಿ ಪ್ರಮುಖವಾಗಿದೆ. ಈ ದಿನವನ್ನು ಶ್ರಾವಣ ಪೌರ್ಣಮಿಗೆ ಅಥವಾ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ, ಅಂದರೆ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುತ್ತದೆ.
ಹಾಗಾಗಿ ಈ ಬಾರಿ ಆಗಸ್ಟ್ 8 ರಂದು ಅಂದರೆ ಇಂದು ಶುಕ್ರವಾರ ಆಚರಿಸಲಾಗುತ್ತದೆ. ಈ ದಿನದಂದು ವರಲಕ್ಷ್ಮೀ ದೇವಿಯನ್ನು ಸಂಪತ್ತು, ಭೂಮಿ, ಬುದ್ಧಿವಂತಿಕೆ, ಪ್ರೀತಿ, ಖ್ಯಾತಿ, ಶಾಂತಿ, ತೃಪ್ತಿ ಮತ್ತು ಶಕ್ತಿಯನ್ನು ನೀಡು ಎಂದು ಬೇಡಿಕೊಳ್ಳಲಾಗುತ್ತದೆ. ಜೊತೆಗೆ ಎಂಟು ದೇವತೆಗಳಾದ ಅಷ್ಟಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಯೋಗಕ್ಷೇಮಕ್ಕಾಗಿ ಈ ವ್ರತವನ್ನು ಆಚರಣೆ ಮಾಡುತ್ತಾರೆ.
ವರ ಮಹಾಲಕ್ಷ್ಮೀ ವ್ರತದಂದು ಮಹಿಳೆಯರು ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಕೈಗಳಿಗೆ ಮದರಂಗಿ ಇಡುತ್ತಾರೆ. ಮನೆ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ. ಮನೆಯ ಬಾಗಿಲುಗಳನ್ನು ತಳಿರು ತೋರಣಗಳಿಂದ ಕಟ್ಟಿ ಸಂಭ್ರಮಿಸುತ್ತಾರೆ.
ವರಲಕ್ಷ್ಮಿಯ ಪ್ರತಿಮೆಯನ್ನು ಹೂವುಗಳು, ಹಣ್ಣುಗಳು ಮತ್ತು ಪ್ರಸಾದದ ಅರ್ಪಣೆಗಳೊಂದಿಗೆ ಪೂಜಿಸಲಾಗುತ್ತದೆ. ಸಂಜೆ ಪೂಜೆಯ ನಂತರ ಉಪವಾಸವನ್ನು ಮುರಿಯಲಾಗುತ್ತದೆ, ಇದು ಇಷ್ಟಾರ್ಥಗಳ ನೆರವೇರಿಕೆಯ ಸಂಕೇತವಾಗಿದೆ. ವರಲಕ್ಷ್ಮಿ ವ್ರತವನ್ನು ಆಚರಿಸುವ ಮೂಲಕ, ಮಹಿಳೆಯರು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಕೋರುತ್ತಾರೆ. ಆನಂದದಾಯಕ ವೈವಾಹಿಕ ಜೀವನ, ಆರ್ಥಿಕ ಭದ್ರತೆ ಮತ್ತು ಸಾಮರಸ್ಯದ ಕುಟುಂಬ ದೊರಕಲಿ ಎಂದು ಬೇಡಿಕೊಳ್ಳುತ್ತಾರೆ.
ವರ ಮಹಾಲಕ್ಷ್ಮಿ ಪೂಜೆಯ ವೇಳೆ ಪಠಿಸುವ ಮಂತ್ರಗಳು
ಲಕ್ಷ್ಮಿ ದೇವಿಯ ಮಂತ್ರಗಳನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು
ನಿಮ್ಮ ಪ್ರತಿಕ್ರಿಯೆ ಏನು?






