ಲಿಂಗಾಯತ ಮಠಕ್ಕೆ ಸ್ವಾಮೀಜಿ ಆಗಿದ್ದ ಮುಸ್ಲಿಂ ವ್ಯಕ್ತಿ “ಸಲಿಂಗ ಕಾಮಿ”: ಬಯಲಾಯ್ತು ಕಾಮಪುರಾಣ!

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿಯ ಗುರುಮಲ್ಲೇಶ್ವರ ಶಾಖಾಮಠದ ಮಠಾಧೀಶನ ಸ್ಥಾನಕ್ಕೆ ಏರಿದ್ದ ಮಹಮ್ಮದ್ ನಿಸಾರ್ ಎಂಬ ವ್ಯಕ್ತಿಯ ಹಿಂದಿನ ಧಾರ್ಮಿಕ ಹಾಗೂ ವೈಯಕ್ತಿಕ ಇತಿಹಾಸ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಮೂಲತಃ ಯಾದಗಿರಿ ಜಿಲ್ಲೆಯ ಶಹಾಪುರದ ನಿವಾಸಿಯಾದ ನಿಸಾರ್, ಹಿಂದೂ ಬಸದಿಯ ಜಂಗಮ ದೀಕ್ಷೆ ಪಡೆದು "ನಿಜಲಿಂಗ ಸ್ವಾಮೀಜಿ" ಎಂಬ ಹೆಸರಿನಲ್ಲಿ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಶ್ವಗುರು ಬಸವಣ್ಣನವರ ತತ್ವಗಳಿಂದ ಪ್ರಭಾವಿತನಾದ ನಿಸಾರ್, ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭುಸ್ವಾಮೀಜಿಯವರಿಂದ ಜಂಗಮ ದೀಕ್ಷೆ ಪಡೆದಿದ್ದರು. ನಂತರ, ಚೌಡಹಳ್ಳಿಯ ಗುರುಮಲ್ಲೇಶ್ವರ ಶಾಖಾಮಠದ ನಿರ್ಮಾಣದಲ್ಲಿ ತೊಡಗಿದ್ದ ಮಹದೇವ ಪ್ರಸಾದ್ ಅವರ ಶಿಫಾರಸ್ಸಿನಿಂದ ನಿಸಾರ್ ಸ್ವಾಮೀಜಿ ಮಠಾಧೀಶ ಸ್ಥಾನವನ್ನೂ ಪಡೆದುಕೊಂಡಿದ್ದರು.
ಆದರೆ ಇದೀಗ, ಅವರು ಮೂಲತಃ ಮುಸ್ಲಿಂ ಧರ್ಮವನ್ನು ಸೇರಿದವರಾಗಿದ್ದರೆಂಬ ಸಂಗತಿ ಮಾತ್ರವಲ್ಲದೆ, ತಮ್ಮ ಮೊಬೈಲ್ ಮೂಲಕ ಬಹಿರಂಗವಾದ ಕೆಲವು ಮಾಹಿತಿ ಅವರು ಸಲಿಂಗಕಾಮಿ ಎಂಬ ಅಂಶವನ್ನೂ ಬಯಲುಮಾಡಿದೆ ಎಂದು ಮೂಲಗಳು ತಿಳಿಸಿವೆ. ಅವರ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಮತ್ತು ಎಸ್ಸೆಸ್ಸೆಲ್ಸಿ ಅಂಕಪಟ್ಟಿಯ ವಿವರಗಳಿಂದ ಅವರ ನಿಜ ಹೆಸರು "ನಿಸಾರ್ ಮಹಮ್ಮದ್" ಎಂದು ದೃಢಪಟ್ಟಿದೆ.
ಇದೇ ಮೊಬೈಲ್ ಮೂಲಕ ಮಾಂಸದ ಸೇವನೆ, ಮದ್ಯಪಾನ ಸೇರಿದಂತೆ ಧಾರ್ಮಿಕ ಪದವಿಗೆ ವಿರೋಧಿಯಾಗುವ ಹಲವು ರೀತಿಯ ರಾಸಲೀಲೆಗಳನ್ನು ಒಳಗೊಂಡ ವಿಡಿಯೋಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ನಿಜಲಿಂಗ ಸ್ವಾಮೀಜಿಯ ನಿಜ ಸ್ವರೂಪ ಬಯಲಾಗುತ್ತಿದ್ದಂತೆ ಸ್ಥಳೀಯರು ಶಾಕ್ ಅನುಭವಿಸಿದ್ದು, ಈ ಸಂಬಂಧ ತನಿಖೆ ಆರಂಭವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






