'ಕಾಂತಾರ' ದಂತಕಥೆಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್..! ʻಕನಕವತಿʼ ಫಸ್ಟ್ ಲುಕ್ ಔಟ್

2022ರಲ್ಲಿ ಬಿಡುಗಡೆಯಾಗಿ ರಾಷ್ಟ್ರಮಟ್ಟದಲ್ಲಿ ಯಶಸ್ಸು ಕಂಡ ‘ಕಾಂತಾರ’ ಸಿನಿಮಾಗೆ ಸಪ್ತಮಿ ಗೌಡ ನಾಯಕಿಯಾಗಿ ಅಭಿನಯಿಸಿದ್ದರು. ಈ ಚಿತ್ರದ ಪ್ರೀಕ್ವೆಲ್ ಆಗಿರುವ ‘ಕಾಂತಾರ: ಚಾಪ್ಟರ್ 1’ ಯಾವ ನಟಿ ನಾಯಕಿಯಾಗುತ್ತಾರೆ ಎಂಬ ಕುತೂಹಲ ಇತ್ತೀಚೆಗೆ ಹೆಚ್ಚು ಕಂಡುಬಂದಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ, ಚಿತ್ರದ ನಿರ್ಮಾಪನಾ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನಟಿ ರುಕ್ಮಿಣಿ ವಸಂತ್ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿ, ಅವರು ಈ ಸಿನಿಮಾದ 'ಕನಕವತಿ' ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದೆ.
ರುಕ್ಮಿಣಿ ವಸಂತ್ ಅವರು ಚಿತ್ರದಲ್ಲಿ ಯುವರಾಣಿ ರೀತಿ ಕಾಣಿಸಿದ್ದಾರೆ. ಅವರ ಪಾತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ. ಪೋಸ್ಟರ್ ಹಿಂಭಾಗ ನೋಡಿದರೆ ಅದು ರಾಜರ ಆಸ್ಥಾನದ ರೀತಿಯೇ ಕಾಣಿಸುತ್ತದೆ. ಅಲ್ಲದೆ, ಇದು ಕದಂಬರ ಕಾಲದ ಕಥೆ ಆಗಿರುವುದರಿಂದ ರುಕ್ಮಿಣಿ ರಾಣಿ ಅಥವಾ ಯುವ ರಾಣಿಯ ಪಾತ್ರ ಮಾಡಿದ್ದರೂ ಅಚ್ಚರಿ ಏನಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






