ಮಂಡ್ಯದಲ್ಲಿ ವಿಲಕ್ಷಣ ಘಟನೆ: ದೇವಸ್ಥಾನದಲ್ಲಿ ಕಳ್ಳತನ ಮಾಡಿ ಅನ್ಯಧರ್ಮದ ಚಿಹ್ನೆ ಬರೆದ ಕಿರಾತಕರು!

ಆಗಸ್ಟ್ 7, 2025 - 22:14
 0  7
ಮಂಡ್ಯದಲ್ಲಿ ವಿಲಕ್ಷಣ ಘಟನೆ: ದೇವಸ್ಥಾನದಲ್ಲಿ ಕಳ್ಳತನ ಮಾಡಿ ಅನ್ಯಧರ್ಮದ ಚಿಹ್ನೆ ಬರೆದ ಕಿರಾತಕರು!

ಮಂಡ್ಯ:- ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಮಾಳಿಗೆಕೊಪ್ಪಲು ಗ್ರಾಮದಲ್ಲಿ ದೇವಸ್ಥಾನವೊಂದರಲ್ಲಿ ಕಳ್ಳತನ ಮಾಡಿ, ಬಳಿಕ ಗೋಡೆಯ ಮೇಲೆ ಅನ್ಯಧರ್ಮದ ಚಿಹ್ನೆ ಬರೆದು ದುಷ್ಕರ್ಮಿಗಳು ಪರಾರಿಯಾಗಿರುವ ವಿಲಕ್ಷಣ ಘಟನೆ ಜರುಗಿದೆ. 

ಬುಧವಾರ ರಾತ್ರಿ ಈ ಕೃತ್ಯ ನಡೆದಿದೆ. ಬುಧವಾರ ರಾತ್ರಿ ದುಷ್ಕರ್ಮಿಗಳು ಚಿಕ್ಕಮಾಳಿಗೆಕೊಪ್ಪಲು ಗ್ರಾಮದ ಏಳೂರಮ್ಮ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಈ ವೇಳೆ ಮಂಗಳಾರತಿ ತಟ್ಟೆಯಲ್ಲಿದ್ದ ಚಿಲ್ಲರೆ ಕಾಸನ್ನು ಕಳ್ಳತನ ಮಾಡಿದ್ದಾರೆ. ಬಳಿಕ ದೇವಸ್ಥಾನದ ಗೋಡೆಯ ಮೇಲೆ 786 ಸಂಖ್ಯೆ ಹಾಗೂ ಅನ್ಯಧರ್ಮದ ಚಿಹ್ನೆಯಾದ ನಕ್ಷತ್ರ ಹಾಗೂ ಅರ್ಧ ಚಂದ್ರವನ್ನು ಬಿಡಿಸಿದ್ದಾರೆ.

ಇದಕ್ಕೂ ಮುನ್ನ ಅದೇ ಗ್ರಾಮದ ದಂಡಿಮಾರಮ್ಮ ದೇವಸ್ಥಾನಕ್ಕೂ ಕೂಡ ನುಗ್ಗಿದ್ದರು. ಆದರೆ ಅಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿದು ಬಂದಿದೆ. ಸ್ಥಳೀಯರೊಬ್ಬರು ದೇವಸ್ಥಾನದ ಕಡೆ ಹೋದಾಗ ದುಷ್ಕರ್ಮಿಗಳು ಪರಾರಿಯಾಗಿರುವುದು ಕಾಣಿಸಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow