ಪ್ರಥಮ್ ವಿಷಯದಲ್ಲಿ ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

ಜುಲೈ 31, 2025 - 18:10
 0  12
ಪ್ರಥಮ್ ವಿಷಯದಲ್ಲಿ ನಾನು ದರ್ಶನ್ ಪರ ನಿಲ್ಲುತ್ತೇನೆ: ನಟ ಧ್ರುವ ಸರ್ಜಾ

ನಟ ಧ್ರುವ ಸರ್ಜಾ ಅವರು ದರ್ಶನ್ ಅಭಿಮಾನಿಗಳು ಮತ್ತು ಬಿಗ್ ಬಾಸ್ ಖ್ಯಾತಿಯ ಪ್ರಥಮ್ ನಡುವಿನ ವಿವಾದದ ಕುರಿತು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದು, "ನಾನು ದರ್ಶನ್ ಸರ್ ಪರ ನಿಲ್ತೀನಿ" ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಧ್ರುವ ಸರ್ಜಾ, ಪ್ರಥಮ್ ಮಾತಾಡೋದು ಸರಿಯಿಲ್ಲ.

ಅವರ ವಿರುದ್ಧ ಏನು ಸಮಸ್ಯೆ ಇದ್ದರೂ ಕಾನೂನು ಮಾರ್ಗದಲ್ಲಿ ಹೋಗಬೇಕು. ದರ್ಶನ್ ಸರ್ಬಗ್ಗೆ ಮಾತನಾಡೋದು ಒಳ್ಳೆಯದು ಅಲ್ಲ ಎಂದು ಹೇಳಿದ್ದಾರೆ.ಚಿಟುಕೆ ಹೊಡೆದು, ವಿಗ್ ಬಗ್ಗೆ ಟೀಕೆ ಮಾಡೋದು ಸರಿಯಲ್ಲ. ಯಾರಾದರೂ ಚಾಕು ತೋರಿಸಿದ್ರೆ, ದೂರು ಕೊಡಬೇಕು,

ಅವರನ್ನೇ ಗುರಿ ಮಾಡಬೇಕು. ದರ್ಶನ್ ಸರ್ಬಗ್ಗೆ ಬೇಧಭಾವದಿಂದ ಮಾತನಾಡುವುದು ಒಪ್ಪಿಕೊಳ್ಳಲಾಗದು ಎಂದು ಧ್ರುವ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂಲಕ ಧ್ರುವ ಸರ್ಜಾ ದರ್ಶನ್ ಪರವಾಗಿ ನಿಲ್ಲುವ ಮೂಲಕ, ಪ್ರಥಮ್ ವಿರುದ್ಧ ಪರೋಕ್ಷವಾಗಿ ಗಂಭೀರ ಟಾಂಗ್ ಕೊಟ್ಟಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow