Rahul in Bengaluru: ಸ್ಪೆಷಲ್ ಫ್ಲೈಟ್ʼನಲ್ಲಿ ಖರ್ಗೆ ಜೊತೆ ಬೆಂಗಳೂರಿಗೆ ಬಂದ ರಾಹುಲ್ ಗಾಂಧಿ..!

ಬೆಂಗಳೂರು: ಮತಗಳ್ಳತನದ ಆರೋಪದ ಮೇಲೆ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಲೋಸಭೆ ವಿರೋಧ ಪಕ್ಷದ ನಾಯಕ ಸಮರ ಸಾರಿದ್ದಾರೆ. ಇದೀಗ "ನಮ್ಮ ಮತ-ನಮ್ಮ ಹಕ್ಕು-ನಮ್ಮ ಹೋರಾಟ" ಪ್ರತಿಭಟನೆಗಾಗಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದು,
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಿಎ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸ್ವಾಗತಿಸಿದ್ದಾರೆ.
ಕೇಂದ್ರ ಚುನಾವಣೆ ಆಯೋಗ ಪ್ರಾಯೋಜಿತ ಮತ ಅಕ್ರಮದ ವಿರುದ್ಧ ಆಯೋಜಿಸಿರುವ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲು ದೆಹಲಿಯಿಂದ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಶಾಲು ಹೊದೆಸಿ ಬರಮಾಡಿಕೊಂಡರು.
ನಿಮ್ಮ ಪ್ರತಿಕ್ರಿಯೆ ಏನು?






