Satish Sail: ಕೈ ಶಾಸಕನಿಗೆ ED ಶಾಕ್: 1.68 ಕೋಟಿ, 6 ಕೆಜಿ ಚಿನ್ನದ ಬಿಸ್ಕೆಟ್ ಸೀಜ್..!

ಆಗಸ್ಟ್ 15, 2025 - 16:05
 0  18
Satish Sail: ಕೈ ಶಾಸಕನಿಗೆ ED ಶಾಕ್: 1.68 ಕೋಟಿ, 6 ಕೆಜಿ ಚಿನ್ನದ ಬಿಸ್ಕೆಟ್ ಸೀಜ್..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಾಂತರ ರೂಪಾಯಿ ನಗದು, ಚಿನ್ನ ಹಾಗೂ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 13 ಮತ್ತು 14 ರಂದು ನಡೆದ ದಾಳಿಯಲ್ಲಿ ಕಾರವಾರದ ಜೊತೆಗೆ ಗೋವಾ, ಮುಂಬೈ ಮತ್ತು ದೆಹಲಿ ಸೇರಿ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯಿತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಗಸ್ಟ್ 13 ಮತ್ತು 14 ರಂದು ದಾಳಿ ನಡೆಸಿದ್ದರು.

ಕಾರವಾರ, ಗೋವಾ, ಮುಂಬೈ ಮತ್ತು ದೆಹಲಿಯಲ್ಲಿ ದಾಳಿ ನಡೆಸಿದ್ದರು. ಶಾಸಕ ಸತೀಶ್ ಸೈಲ್ ಸೇರಿ ಇತರರ ಮನೆಗಳ ಮೇಲೆ ದಾಳಿಯಾಗಿತ್ತು. ವೇಳೆ ಹಲವು ದಾಖಲೆಗಳು ಮತ್ತು ಇತರೆ ರೆಕಾರ್ಡ್ಸ್ಗಳು ಕೂಡ ಪತ್ತೆಯಾಗಿದ್ದವು.

ಎಷ್ಟು ಪ್ರಮಾಣದ ನಗದು ಮತ್ತು ಚಿನ್ನ?

ಇಡಿ ಅಧಿಕೃತ ಮಾಹಿತಿ ಪ್ರಕಾರ:

  • ₹1.68 ಕೋಟಿ ನಗದು ವಶ
  • 75 ಕೆಜಿ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಪತ್ತೆ
  • ₹14.13 ಕೋಟಿ ಬ್ಯಾಂಕ್ ಖಾತೆಗಳ ಹಣವನ್ನು ಫ್ರೀಜ್

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow