ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು - ಇದಲ್ಲವೇ ಮಾದರಿ ಕೆಲಸ

ಆಗಸ್ಟ್ 15, 2025 - 22:12
 0  11
ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿದ ವಿದೇಶಿಗರು - ಇದಲ್ಲವೇ ಮಾದರಿ ಕೆಲಸ

ಉಡುಪಿ:- ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯ ಕಟ್ಟಿ  ವಿದೇಶಿಗರು ಮಾದರಿ ಕೆಲಸ ಮಾಡಿದ್ದಾರೆ. ದೂರದ ಊರಿನಿಂದ ಇಂಟರ್ನ್‌ಶಿಪ್‌ಗಾಗಿ ನಮ್ಮ ಊರಿಗೆ ಬಂದವರು. ಸುಮಾರು ಎರಡು ತಿಂಗಳುಗಳ ಕಾಲ ಬೈಂದೂರು ವಲಯದ ಗ್ರಾಮೀಣ ಪ್ರದೇಶದ ಹಳ್ಳಿಗಾಡಿನ ಕನ್ಯಾನ ಗ್ರಾಮದ ಕೂಡ್ಲು ಸರಕಾರಿ ಶಾಲಾವಿದ್ಯಾರ್ಥಿಗಳ ಜೊತೆ ಆಟಪಾಠದಲ್ಲಿ ಭಾಗಿಯಾದ ಅವರು ಕೊನೆಯಲ್ಲಿ ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸಿದ್ದಾರೆ. ಮಕ್ಕಳಿಗೆ ಪಾಠ ಪ್ರವಚನ ಮಾಡಿದ ಈ ಫ್ರಾನ್ಸ್ ದೇಶದ ನಾಗರೀಕರು ಇಲ್ಲಿನ ಮಕ್ಕಳಿಗೆ ಅತೀ ಅಗತ್ಯವಾಗಿ ಬೇಕಿದ್ದ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದಾರೆ.

ಹಾಗಂತ ಹಣ ಕೊಟ್ಟು ಕೆಲಸ ಮಾಡಿಸದೇ ಇವರು ಸ್ವತಃ ಶೌಚಾಲಯದ ಗುಂಡಿ ತೆಗೆಯುವುದರಿಂದ ಹಿಡಿದು ಶೌಚಗೃಹದ ಮೇಲ್ಪಾಡು ನಿರ್ಮಾಣವನ್ನು ಮಾಡುವ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಂಟರ್ನ್‌ಗಾಗಿ  ವಿದೇಶದಿಂದ ಬಂದವರು ಶಾಲಾ ಮಕ್ಕಳ ಜೊತೆಗೆ ಬೆರೆಯುತ್ತಿರುವುದನ್ನು ಕಾಣಬಹುದು. ಈ ಶಾಲಾ ಮಕ್ಕಳಿಗೆ ಅಗತ್ಯವಿರುವ ಶೌಚಾಲಯವನ್ನು ಕೊಡುಗೆಯಾಗಿ ನೀಡಿದ್ದು, ತಾವೇ ಈ ಶೌಚಾಲಯ ನಿರ್ಮಾಣದ ಕೆಲಸ ಮಾಡುತ್ತಿರುವುದನ್ನು ನೋಡಬಹು ದಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow