ಪಿಎಸ್‌ಐ ಪತ್ನಿ ಆತ್ಮಹತ್ಯೆ: ದಿಢೀರ್ ನಿರ್ಧಾರಕ್ಕೆ ಕಾರಣ?

ಆಗಸ್ಟ್ 15, 2025 - 18:02
 0  20
ಪಿಎಸ್‌ಐ ಪತ್ನಿ ಆತ್ಮಹತ್ಯೆ: ದಿಢೀರ್ ನಿರ್ಧಾರಕ್ಕೆ ಕಾರಣ?

ಬಳ್ಳಾರಿ:-  ಬಳ್ಳಾರಿ ಜಿಲ್ಲೆಯ ಮೋಕಾದಲ್ಲಿ ಪಿಎಸ್‌ಐ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಇವರುಮೋಕಾ ಪೊಲೀಸ್ ಠಾಣೆ ಪಿಎಸ್‌ಐ ಕೆ.ಕಾಳಿಂಗ ಪತ್ನಿ. ಸಹೋದರ ಹಾಗೂ ಇಬ್ಬರು ಸಹೋದರಿಯರ ಸಾವಿನಿಂದ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎನ್ನಲಾಗಿದೆ.

2 ತಿಂಗಳ ಹಿಂದೆ ಚೈತ್ರಾ ಅವರ ಏಕೈಕ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದ. 2 ವರ್ಷಗಳ ಅಂತರದಲ್ಲಿ ಇದ್ದ ಒಬ್ಬ ಸಹೋದರ ಹಾಗೂ ಇಬ್ಬರು ಸಹೋದರಿಯರು ಮೃತಪಟ್ಟಿದ್ರು. ಹೀಗಾಗಿ ಚೈತ್ರಾ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಅಂತ ತಿಳಿದುಬಂದಿದೆ.ಪತ್ನಿ ಕಳೆದುಕೊಂಡ ಪತಿ ಕಾಳಿಂಗ ಸೇರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow