ಗೋವಾ ಮುಖ್ಯಮಂತ್ರಿ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: DCM ಡಿಕೆಶಿ ವಾಗ್ದಾಳಿ

ಜುಲೈ 24, 2025 - 23:28
 0  9
ಗೋವಾ ಮುಖ್ಯಮಂತ್ರಿ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ: DCM ಡಿಕೆಶಿ  ವಾಗ್ದಾಳಿ

ಬೆಂಗಳೂರು:- ಗೋವಾ ಸಿಎಂ ಪ್ರಮೋದ್‌ ಸಾವಂತ್‌ ವಿರುದ್ಧ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.  ಮಹದಾಯಿಗೆ ಕೇಂದ್ರ ಸರ್ಕಾರ ಅನುಮತಿ ಕೊಡಲ್ಲ ಎಂಬ ಗೋವಾ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಗೋವಾ ಸಿಎಂ ಹೇಳಿಕೆಯನ್ನ ನಾನು ಖಂಡಿಸುತ್ತೇನೆ. ಗೋವಾ ಸಿಎಂ ಮೆಂಟಲ್ ಬ್ಯಾಲೆನ್ಸ್ ಕಳೆದುಕೊಂಡಿದ್ದಾರೆ. ಗೋವಾ ಸಿಎಂಗೆ ಫೆಡರಲ್‌ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ.

ಈಗಾಗಲೇ ಮಹದಾಯಿ ಯೋಜನೆ ಬಗ್ಗೆ ಅವಾರ್ಡ್ ತೀರ್ಮಾ ಆಗಿದೆ. ಟೆಂಡರ್ ಕೂಡ ಕರೆಯಲಾಗಿದೆ. ಕೆಲಸ ಶುರು ಮಾಡಬೇಕು. ಇದರ ಮಧ್ಯೆ ಅರಣ್ಯ ಇಲಾಖೆ ಏನೋ ನೊಟೀಸ್‌ ಕೊಟ್ಟಿದೆ. ನಾವು ಅದಕ್ಕೆ ಎಲ್ಲಾ ಉತ್ತರ ಕೊಡ್ತೀವಿ. ಮಹದಾಯಿ ವಿಷಯದಲ್ಲಿ ನಮ್ ಕೆಲಸ ನಾವು ಪ್ರಾರಂಭ ಮಾಡ್ತೀವಿ ಅಂತ ಸ್ಪಷ್ಟನೆ ನೀಡಿದರು.

ಇದು ನಮ್ಮ ರಾಜ್ಯದ ಸಂಸದರ ಸ್ವಾಭಿಮಾನದ‌‌ ಪ್ರಶ್ನೆ. ಈವರೆಗೂ ಸಂಸದರು ಬಾಯಿ ಮುಚ್ಚಿಕೊಂಡಿರೋದೇ ತಪ್ಪು. ಒಂದು ಎಂಪಿ ಸೀಟಿಗೋಸ್ಕರ ನಾವು ನಮ್ಮನ್ನ ಮಾರಿಕೊಳ್ಳೋಕೆ ಸಾಧ್ಯವಿಲ್ಲ. 28 ಸಂಸದರು, 12 ಜನ ರಾಜ್ಯಸಭೆ ಸದಸ್ಯರು ಈ ಬಗ್ಗೆ ಮಾತಾಡಬೇಕು. ನಾನು ದೆಹಲಿಗೆ ಹೋಗಿ ಸಂಸದರ ಜೊತೆ ಮಾತಾಡ್ತೀನಿ. ಪ್ರಧಾನಿ, ಜಲಶಕ್ತಿ ಮಂತ್ರಿಗಳಿಗೂ ಸಮಯ ‌ಕೇಳ್ತೀನಿ. ಇದರ ಬಗ್ಗೆ ಚರ್ಚೆ ಮಾಡ್ತೀನಿ ಅಂತ‌ ತಿಳಿಸಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow