Rishabh Pant: ಮೈದಾನದಿಂದ ಹೊರ ನಡೆದ ರಿಷಭ್ ಪಂತ್..! ಯಾಕೆ ಗೊತ್ತಾ..?

ಜುಲೈ 24, 2025 - 16:04
 0  5
Rishabh Pant: ಮೈದಾನದಿಂದ ಹೊರ ನಡೆದ ರಿಷಭ್ ಪಂತ್..! ಯಾಕೆ ಗೊತ್ತಾ..?

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾಗೆ ಭಾರೀ ಆಘಾತ ಆಗಿದೆ. ಉಪನಾಯಕ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ಅವರು ಆಟದ ನಡುವೆ ಗಂಭೀರವಾಗಿ ಗಾಯಗೊಂಡು ಆಂಬ್ಯುಲೆನ್ಸ್ನಲ್ಲಿ ಮೈದಾನ ತೊರೆದಿದ್ದಾರೆ.

ಪಂದ್ಯದ 68ನೇ ಓವರ್ನಲ್ಲಿ ಕ್ರಿಸ್ ವೋಕ್ಸ್ ಎಸೆದ ಚೆಂಡಿಗೆ ರಿವರ್ಸ್ ಸ್ವೀಪ್ ಶಾಟ್ಪ್ರಯತ್ನಿಸಿದ ಪಂತ್ ಅವರು, ಫುಲ್ ಟಾಸ್ ಬಾಲ್ ಮಿಸ್ ಮಾಡಿ, ಬಲ ಕಾಲಿಗೆ ನೇರವಾಗಿ ಚೆಂಡು ತಗುಲಿಸಿದರು. ಪರಿಣಾಮವಾಗಿ ಅವರು ತಕ್ಷಣವೇ ನೋವಿನಿಂದ ಅಸ್ವಸ್ಥರಾದರು. ತಮ್ಮ ಶೂ ತೆಗೆದಾಗಲೇ ರಕ್ತಸ್ರಾವ ಕಾಣಿಸಿಕೊಂಡಿದ್ದು, ಪಾದದಲ್ಲಿ ಊತವೂ ಆಗಿತ್ತು. ನಡೆಯಲಾರದ ಮಟ್ಟಿಗೆ ಗಾಯವಾದ ಕಾರಣ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಮೈದಾನದಿಂದ ಹೊರ ತರಲಾಯಿತು.

ಪಂತ್ ಅವರು 48 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಅವರು ಮೌಲ್ಯಮಯ ಇನಿಂಗ್ಸ್ ಕಟ್ಟುತ್ತಿದ್ದ ಸಮಯದಲ್ಲೇ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಬಿಸಿಸಿಐ ಅವರ ಗಾಯದ ಸ್ಥಿತಿಗೆ ಸಂಬಂಧಿಸಿದಂತೆ ಇನ್ನಷ್ಟೇ ಅಧಿಕೃತ ವೈದ್ಯಕೀಯ ಅಪ್ಡೇಟ್ ನೀಡಬೇಕಿದೆ.

 ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಭಾರತ 4 ವಿಕೆಟ್ ಕಳೆದುಕೊಂಡಿದೆ. ರವೀಂದ್ರ ಜಡೇಜಾ ಹಾಗೂ ಶಾರ್ದುಲ್ ಠಾಕೂರ್ ಕ್ರೀಸ್ನಲ್ಲಿ ಇದ್ದಾರೆ. ಪಂತ್ ಪುನಃ ಬೇಟೆಗೆ ಬರಬಹುದೇ ಎಂಬ ಪ್ರಶ್ನೆಗೆ ಈತನಕ ಸ್ಪಷ್ಟತೆ ದೊರಕಿಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow