ಜಸ್​ಪ್ರೀತ್ ಬುಮ್ರಾ IPLನಿಂದ ಹೊರಗುಳಿಯಬೇಕಿತ್ತು: ಈ ರೀತಿ ಹೇಳಿದ್ಯಾರು ಗೊತ್ತಾ..?

ಆಗಸ್ಟ್ 12, 2025 - 09:30
 0  11
ಜಸ್​ಪ್ರೀತ್ ಬುಮ್ರಾ IPLನಿಂದ ಹೊರಗುಳಿಯಬೇಕಿತ್ತು: ಈ ರೀತಿ ಹೇಳಿದ್ಯಾರು ಗೊತ್ತಾ..?

ಮುಂಬೈ: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನೀಡಿದ ವಿಶ್ರಾಂತಿಯ ಬಗ್ಗೆ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌ಸರ್ಕಾರ್ ಪ್ರಶ್ನೆ ಎತ್ತಿದ್ದಾರೆ. ಬುಮ್ರಾ ಐಪಿಎಲ್ 2025ರಲ್ಲಿ 12 ಪಂದ್ಯಗಳಲ್ಲಿ ಆಡಿದರೂ, ಟೆಸ್ಟ್ ಸರಣಿಯ 2ನೇ ಮತ್ತು 5ನೇ ಪಂದ್ಯಗಳಿಂದ ವರ್ಕ್‌ಲೋಡ್ ಕಾರಣದಿಂದ ಹೊರಗುಳಿದಿದ್ದರು.

ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಾಗಿದ್ದರೆ, ಅದು ಐಪಿಎಲ್ ಸಮಯದಲ್ಲೇ ಆಗಬೇಕಿತ್ತು. ಬಿಸಿಸಿಐ ಮತ್ತು ಆಯ್ಕೆದಾರರು ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ ಅವರನ್ನು ಮನವರಿಕೆ ಮಾಡಿ, ಬುಮ್ರಾ ಕಡಿಮೆ ಪಂದ್ಯಗಳಲ್ಲಿ ಮಾತ್ರ ಆಡಲಿ ಅಥವಾ ಸಂಪೂರ್ಣವಾಗಿ ಐಪಿಎಲ್‌ಗಿಂದ ಹೊರಗುಳಿಯಲಿ ಎಂದು ಹೇಳಬೇಕಿತ್ತು," ಎಂದು ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟರು.

ಅವರು ಮುಂದುವರಿಸಿ, ಐಪಿಎಲ್‌ನಲ್ಲಿ ಗಳಿಸಿದ ರನ್‌ಗಳು ಮತ್ತು ವಿಕೆಟ್‌ಗಳನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಆದರೆ ಇಂಗ್ಲೆಂಡ್‌ ಸರಣಿಯಂತಹ ಐತಿಹಾಸಿಕ ಪಂದ್ಯಗಳಿಗೆ ಸಂಪೂರ್ಣ ಫಿಟ್‌ ಆಗಿರುವ ಬುಮ್ರಾ ಅಗತ್ಯ ಎಂದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow