ಫೋನ್ ಪೇ, ಗೂಗಲ್ ಪೇ ಮಾಲೀಕರು ನೋಡಲೇಬೇಕಾದ ಸ್ಟೋರಿ!

ನೆಲಮಂಗಲ:- ಫೋನ್ ಪೇ, ಗೂಗಲ್ ಪೇ ಮಾಲೀಕರು ನೋಡಲೇಬೇಕಾದ ಸ್ಟೋರಿ. ಕಳ್ಳರು ಹೊಸದಾರಿ ಹುಡಿಕಿದ್ದಾರೆ ಹುಷಾರ್. ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಚಾಲಾಕಿ ಖದೀಮರು ದುಡ್ಡು ಮಾಡಲು ಹೊಸ ಕಳ್ಳ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.
ಈ ರೀತಿಯ ಘಟನೆಗಳು ನಡೆದಿವೆ. ದಿನಸಿ, ಕಾಂಡಿಮೆಂಟ್ಸ್ ಹಾಗೂ ಹಣದ ವಹಿವಾಟು ನಡೆಯುವ ಮಳಿಗೆಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಫೋನ್ ಪೇ, ಗೂಗಲ್ ಪೇ ಬಳಸುವ ಅಂಗಡಿ ಮಾಲಿಕರು ಎಚ್ಚರ ವಹಿಸಬೇಕಾಗಿದೆ.
ಚಾಲಾಕಿ ಖದೀಮರು ದಿನಸಿ, ಕಾಂಡಿಮೆಂಟ್ಸ್ ಹಾಗೂ ಹಣದ ವಹಿವಾಟು ನಡೆಯುವ ಮಳಿಗೆಗಳನ್ನು ಟಾರ್ಗೆಟ್ ಮಾಡಿ, ಬ್ಯುಸಿ ಇದ್ದ ಸಮಯದಲ್ಲೇ ಫೋನ್ ಪೇ ಸ್ಕ್ಯಾನರ್ ಸರಿ ಇದೆಯಾ ಎಂದು ಬರುತ್ತಾರೆ. ಸರ್ವಿಸ್ ನೀಡುವ ನೆಪದಲ್ಲಿ ಮೊಬೈಲ್ ಕೇಳುತ್ತಾರೆ. ಒಂದು ರೂ ಹಣ ಹಾಕಿ ಸರಿಯಾಗಿದೆ, ಸರ್ವಿಸ್ ಆಗಿದೆ ಎನ್ನುತ್ತಾರೆ. ಬಳಿಕ ಕ್ಷಣಾರ್ಧದಲ್ಲಿ ಹಣವನ್ನು ತಮ್ಮ ಖಾತೆಗೆ ಹಾಕಿಕೊಂಡು ಪರಾರಿ ಆಗುತ್ತಾರೆ.
ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿದೆ. ಬಾಬು ಸ್ಟೋರ್ ದಿನಸಿ ಅಂಗಡಿಗೆ ಬಂದಿದ್ದ ಖತರ್ನಾಕ್ ಕಳ್ಳ, ಫೋನ್ ಪೇ ಸ್ಕ್ಯಾನರ್ ಸರ್ವಿಸ್ ಮಾಡುವ ನೆಪದಲ್ಲಿ ಮೊಬೈಲ್ ಪಡೆದಿದ್ದಾನೆ. ಬಳಿಕ 75 ಸಾವಿರ ರೂ ಹಣ ವರ್ಗಾವಣೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾನೆ.ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






