ಬಿಕ್ಲು ಶಿವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸುಪಾರಿ ಕಿಲ್ಲರ್ಸ್ ಜೊತೆ ಜಗ್ಗ ಮೀಟಿಂಗ್ - CCTVಯಲ್ಲಿ ಸೆರೆ

ಬೆಂಗಳೂರು: ರೌಡಿಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಗೆ ಹೊಸ ಟಿಸ್ಟ್ ಸಿಕ್ಕಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಮಾಸ್ಟರ್ ಮೈಂಡ್ ಜಗ್ಗ ಎಸ್ಕೇಪ್ ಆಗುವ ಸಿಸಿಟಿವಿ ದೃಶ್ಯ ಹೊರ ಬಿದ್ದಿದೆ.
ಬೆಳಗ್ಗೆ 8 ಗಂಟೆ 5 ನಿಮಿಷಕ್ಕೆ ಬಿಕ್ಲು ಶಿವನ ಹ*ತ್ಯೆಯಾದ್ರೆ, ರಾತ್ರಿ 10 ಗಂಟೆ 15 ನಿಮಿಷಕ್ಕೆ ಹೆಣ್ಣೂರಿನ ತನ್ನ ಅಪಾರ್ಟ್ಮೆಂಟ್ನ ಲಿಫ್ಟ್ ನಿಂದ ಇಳಿದು ತನ್ನ ಆಡಿ ಕಾರಿನಲ್ಲಿ ಜಗ್ಗ ಎಸ್ಕೇಪ್ ಆಗಿದ್ದಾನೆ. ಬಳಿಕ ಕಾರಿನಲ್ಲಿ ಅತ್ತಿಬೆಲೆ ಟೋಲ್ ಮೂಲಕ ನೇರವಾಗಿ ಚೆನ್ನೈಗೆ ಎಸ್ಕೇಪ್ ಆಗಿದ್ದಾನೆ. ಇನ್ನು ಶಾಸಕ ಬೈರತಿ ಬಸವರಾಜ್ PA ಹನುಮಂತಗೆ ನೋಟಿಸ್ ನೀಡಲಾಗಿದೆ.
ಪ್ರಕರಣದ ತನಿಖೆ ನಡೆಸ್ತಿರೋ ತನಿಖಾಧಿಕಾರಿ ಪ್ರಕಾಶ್ ರಾಥೋಡ್ ನೋಟಿಸ್ ನೀಡಿದ್ದು, ಜುಲೈ 25 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅಂತೆಯೇ ಹನುಮಂತ್ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಬರೋಬ್ಬರಿ ಒಂದು ಗಂಟೆಯಿಂದ ಪುಲಕೇಶಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಈ ಮಧ್ಯೆ ಪ್ರಕರಣವನ್ನ ಸಿಐಡಿಗೆ ವರ್ಗಾಯಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






