ಹಾಸನ: ಮಕ್ಕಳು ತಂದಿಟ್ಟ ಜಗಳದಲ್ಲಿ ಹೋಯ್ತು ತಂದೆಯ ಪ್ರಾಣ!
ಹಾಸನ: ಮಕ್ಕಳ ಗಲಾಟೆಯಿಂದ ಉಂಟಾದ ವಿವಾದ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಗಲಾಟೆಯಲ್ಲಿ ಫರಾನ್ ಮಾಡಿದ ದಾಳಿಯಿಂದ ತೌಫಿಕ್ (28) ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಘಟನೆಯಾದ ಬಳಿಕ ತೌಫಿಕ್ ಕುಟುಂಬಸ್ಥರು ಫರಾನ್ ಮನೆಗೆ ದಾಳಿ ನಡೆಸಿ, ಮನೆಗೆ ಹಾನಿ ಮಾಡಿದ್ದು, ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತೌಫಿಕ್ ನಿವಾಸಕ್ಕೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ, ಸ್ಥಳೀಯ ಪಿಎಸ್ಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ವಿಚಾರಣೆ ಮುಂದುವರಿಸುತ್ತಿದೆ. ಘಟನೆಯಿಂದ ಮುಜವಾರ್ ಮೊಹಲ್ಲಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಶಾಂತಿ ಕಾಪಾಡಲು ಪೊಲೀಸರು ಮನವಿ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?