ಆಟಗಾರರ ಆಯ್ಕೆ ವಿಷಯದಲ್ಲಿ ಧೋನಿ ಪಕ್ಷಪಾತ ಮಾಡುತ್ತಿದ್ದರು: ಧೋನಿ ವಿರುದ್ಧ ಪಠಾಣ್ ಗಂಭೀರ ಆರೋಪ
ಆಟಗಾರರ ಆಯ್ಕೆ ವಿಷಯದಲ್ಲಿ ಧೋನಿ ಪಕ್ಷಪಾತ ಮಾಡುತ್ತಿದ್ದರು ಎಂದು ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ
2008 ರ ಆಸ್ಟ್ರೇಲಿಯಾ ಸರಣಿಯ ಸಮಯದಲ್ಲಿ, ಇರ್ಫಾನ್ ಚೆನ್ನಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ಧೋನಿ ಹೇಳಿಕೆ ನೀಡಿದ್ದರು. ಆದರೆ ಆ ಸರಣಿಯುದ್ದಕ್ಕೂ ನಾನು ಉತ್ತಮವಾಗಿ ಬೌಲಿಂಗ್ ಮಾಡಿದ್ದೆ. ಕೆಲವೊಮ್ಮೆ, ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ತಿರುಚಲಾಗುತ್ತದೆ. ಆದ್ದರಿಂದ ನಾನು ಈ ಬಗ್ಗೆ ಸ್ಪಷ್ಟನೆ ಕೇಳಲು ಬಯಸಿದ್ದೆ. ಹೀಗಾಗಿ ನಾನು ಅವರನ್ನೇ, ಇದಕ್ಕಿಂತ ಚೆನ್ನಾಗಿ ಬೌಲಿಂಗ್ ಮಾಡುವುದು ಹೇಗೆ? ಎಂದು ಕೇಳಿದ್ದೆ.
ಈ ವೇಳೆ ಧೋನಿ, ಆ ಥರ ಏನೂ ಇಲ್ಲ. ಎಲ್ಲವೂ ಯೋಜನೆಯಂತೆ ಚೆನ್ನಾಗಿ ನಡೀತಿದೆ ಎಂದರು. ನಾಯಕನಿಂದಲೇ ಈ ಬಗ್ಗೆ ಸ್ಪಷ್ಟನೆ ಸಿಕ್ಕ ಮೇಲೆ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೇ.
ಆದರೆ ಇದಾದ ಬಳಿಕ ಕೂಡ ನೀವು ಮತ್ತೆ ಮತ್ತೆ ವಿವರಣೆಗಳನ್ನು ಕೇಳುತ್ತಿದ್ದರೆ, ಅದು ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ನಮಗೂ ಸ್ವಾಭಿಮಾನ ಇರುತ್ತಲ್ವಾ?
ನನಗೆ ಯಾರದ್ದಾದರೂ ಕೋಣೆಗೆ ಹೋಗಿ ಹುಕ್ಕಾ ಸೆಟ್ ಮಾಡಿಕೊಡುವ ಅಥವಾ ಅದರ ಬಗ್ಗೆ ಮಾತನಾಡುವ ಅಭ್ಯಾಸ ಇರಲಿಲ್ಲ. ಇವೆಲ್ಲವೂ ಎಲ್ಲರಿಗೂ ತಿಳಿದಿರುವ ವಿಷಯ. ಕೆಲವೊಮ್ಮೆ ನೀವು ಅದರ ಬಗ್ಗೆ ಮಾತನಾಡದಿದ್ದರೆ, ಅದು ಉತ್ತಮ. ಒಬ್ಬ ಕ್ರಿಕೆಟಿಗನ ಕೆಲಸವೆಂದರೆ ಮೈದಾನದಲ್ಲಿ ಪ್ರದರ್ಶನ ನೀಡುವುದು ಮತ್ತು ನಾನು ಅದನ್ನೇ ಕೇಂದ್ರೀಕರಿಸುತ್ತಿದ್ದೆ ಎಂದು ಪಠಾಣ್ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?