ಧರ್ಮಸ್ಥಳ ಕೇಸ್‌ʼಗೆ ಬಿಗ್‌ ಟ್ವಿಸ್ಟ್:‌ ಈವರೆಗೆ ಪತ್ತೆಯಾದ ಬುರುಡೆ, ಮೂಳೆಗಳು ಯಾರದ್ದು?

ಅಕ್ಟೋಬರ್ 1, 2025 - 15:55
 0  16
ಧರ್ಮಸ್ಥಳ ಕೇಸ್‌ʼಗೆ ಬಿಗ್‌ ಟ್ವಿಸ್ಟ್:‌ ಈವರೆಗೆ ಪತ್ತೆಯಾದ ಬುರುಡೆ, ಮೂಳೆಗಳು ಯಾರದ್ದು?

ಮಂಗಳೂರು:- ಇಡೀ ದೇಶಾದ್ಯಂತ ಹೆಚ್ಚು ಚರ್ಚೆ ಆಗಿದ್ದ ಪ್ರಕರಣ ಧರ್ಮಸ್ಥಳ ಕೇಸ್. ಹೌದು, ಕಲರ್ ಕಲರ್ ಕಾಗೆ ಹಾರಿಸುತ್ತಿದ್ದ ಚಿನ್ನಯ್ಯನ ಒಂದೊಂದೇ ವಿಚಾರಗಳು ಬಯಲಿಗೆ ಬರುತ್ತಿವೆ. ಸತ್ಯ ತಲೆ ಮೇಲೆ ಹೊಡೆದಂಗೆ ಹೇಳಿದ ಚಿನ್ನಯ್ಯನ ಕರ್ಮಕಾಂಡ ಬಟಾ ಬಯಲಾಗಿದೆ.

ಚಿನ್ನಯ್ಯ ಕೋರ್ಟ್ಗೆ ತಂದಿದ್ದ ಬುರುಡೆ 30 ವರ್ಷ ವಯಸ್ಸಿನ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ. ಎಸ್‌ಐಟಿ ತನಿಖೆ ವೇಳೆ ಸಿಕ್ಕಿದ್ದ ಹಾಗೂ ಚಿನ್ನಯ್ಯ ತಂದಿದ್ದ 3 ಅಸ್ಥಿಪಂಜರವೂ ಪುರುಷರದ್ದು ಎಂಬುದು ಸಾಬೀತಾಗಿದೆ. ಎಸ್‌ಐಟಿ ತನಿಖೆ ವೇಳೆ 6ನೇ ಸ್ಪಾಟ್‌ನಲ್ಲಿ ಸಿಕ್ಕಿದ್ದು 35 ವರ್ಷ ಪುರುಷನ ಬುರುಡೆ.

ಸ್ಪಾಟ್ ನಂ.11 ರಲ್ಲಿ ಬುರುಡೆಯೊಂದು ಭೂಮಿಯ ಮೇಲೆ ಪತ್ತೆಯಾಗಿತ್ತು. ಈ ಬುರುಡೆಯೂ ಪುರುಷನದ್ದು ಎಂದು ಸಾಬೀತಾಗಿದ್ದು, ಈ ಬುರುಡೆಯು ಒಂದು ವರ್ಷ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯದ್ದು ಎಂದು ಶಂಕಿಸಲಾಗಿದೆ.ಎಸ್‌ಐಟಿ ಅಧಿಕಾರಿಗಳು ಮೂರು ಬುರುಡೆಗೂ ಪ್ರತ್ಯೇಕ ಎಫ್‌ಐಆರ್ ದಾಖಲು ಮಾಡಿದ್ದಾರೆ. ತನಿಖೆ ಚುರುಕು ಮಾಡಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow