ಹಾಡಹಗಲೆ ಕಳ್ಳರ ಕೃತ್ಯ: ಕಲ್ಯಾಣ ಮಂಟಪದಲ್ಲಿದ್ದ ಮನೆಯಲ್ಲಿ ಕಳ್ಳತನ!

ಸೆಪ್ಟೆಂಬರ್ 6, 2025 - 16:05
 0  12
ಹಾಡಹಗಲೆ ಕಳ್ಳರ ಕೃತ್ಯ: ಕಲ್ಯಾಣ ಮಂಟಪದಲ್ಲಿದ್ದ ಮನೆಯಲ್ಲಿ ಕಳ್ಳತನ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಡಹಗಲೆ ಮನೆಗೆ ನುಗ್ಗಿ ಕಳ್ಳತನ ನಡೆದಿರುವ ಘಟನೆ ಜರುಗಿದೆ. ಘಟನೆ ದೃಶ್ಯ ಸೆರೆಯಾಗಿದೆ.

ಕಲ್ಯಾಣ ಮಂಟಪದಲ್ಲಿದ್ದ ಮನೆಯಲ್ಲಿ ಕಳ್ಳತನ ನಡೆದಿದೆ. ಶೀತಲ್ ತಾಪಾ ಅವರು ಕಲ್ಯಾಣ ಮಂಟಪದ ಇಂಚಾರ್ಜ್ ಆಗಿದ್ದರು. ಮನೆಯಲ್ಲಿ ಯಾರು ಇಲ್ಲದ ಟೈಂ ನೋಡಿ ಕಳ್ಳತನ ನಡೆದಿದೆ. ತಾಪಾ ಅವರ ತಾಯಿ, ಹೆಂಡತಿ ಕೆಲಸಕ್ಕೆ ,ಹೋಗಿದ್ರೆ,ಮಗಳು ಟ್ಯೂಷನ ಗೆ ಹೋಗಿದ್ದಾರೆ. ಮನೆಯ ಡೋರ್ ಓಪನ್ ಮಾಡಿ‌ ಲಾಕರ್ ನಲ್ಲಿದ್ದ ಚಿನ್ನ ನಗದು ಕಳ್ಳತನ ಮಾಡಲಾಗಿದೆ. ಒಂದು ಲಕ್ಷ ನಗದು, ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.

ಬಾಣಸವಾಡಿಯ ಶ್ರೀ ರಾಮಚಂದ್ರ ಕಾಂಪ್ಲೆಕ್ಸ್ ನಲ್ಲಿ ಈ ಕುಟುಂಬ ಇತ್ತು. ಕಳೆದ ಎರಡು ವರ್ಷಗಳಿಂದ ಶಿಥಲ್ ತಾಪಾ ಇಲ್ಲಿ ವಾಸ ಆಗಿದ್ದರು ಎನ್ನಲಾಗಿದೆ. ಕಳ್ಳನ ಕರಾಮತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಣಸವಾಡಿ ಠಾಣೆಗೆ ಶೀತಲ್ ತಾಪಾ ದೂರು ನೀಡಿದರು. ದೂರಿನ ಅನ್ವಯ ತನಿಖೆ ಕೈಗೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow