Shocking: 80 ಮಂದಿ SSLC ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಕಳುಹಿಸಿದ ಪ್ರಿನ್ಸಿಪಾಲ್! ಯಾಕೆ ಗೊತ್ತಾ..?

ಗುರು ಎಂದರೆ ಸಾವಿರ ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ತಂದ ವ್ಯಕ್ತಿ. ಒಬ್ಬ ಗುರು ಇಲ್ಲದೆ ವಿದ್ಯಾರ್ಥಿ ಜೀವನವನ್ನು ಊಹಿಸಲು ಸಾಧ್ಯವಿಲ್ಲ. ಒಬ್ಬ ಗುರುವಿಗೆ ತಾನು ಕಳಿಸಿದ್ದ ಎಲ್ಲಾ ವಿದ್ಯಾರ್ಥಿಗಳು ತನ್ನ ಮಕ್ಕಳಂತೆ ತೋರುವವರು. ಒಂದು ದೇಶದ ಭವಿಷ್ಯವನ್ನು ರೂಪಿಸುವುದು ಮಕ್ಕಳ ಕೈಯಲ್ಲಿದೆ ಎಂದು ಹೇಳಲಾಗುತ್ತದೆ. ಆದರೆ ಮಕ್ಕಳ ಭವಿಷ್ಯವನ್ನು ರೂಪಿಸುವುದು ಅಧ್ಯಾಪಕರ ಪ್ರಮುಖ ಪಾತ್ರ ವಹಿಸುತ್ತಾರೆ.
ಆದ್ರೆ ಇಲ್ಲೊಬ್ಬ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಬ್ಲೇಸರ್ನಲ್ಲೇ ಮನೆಗೆ ಕಳುಹಿಸಿರುವ ಘಟನೆ ನಡೆದಿದೆ. ಜಾರ್ಖಂಡ್ ರಾಜ್ಯದ ಧನಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ತಮ್ಮ ಶರ್ಟ್ ಮೇಲೆ ಸಂದೇಶಗಳನ್ನು ಬರೆದಿದ್ದುದ್ದಕ್ಕೆ 80 ಮಂದಿ ಶಾಲಾ ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿದ ಮಹಿಳಾ ಪ್ರಾಂಶುಪಾಲರು, ಮೈಮೇಲೆ ಶರ್ಟ್ ಇಲ್ಲದೆ ಬ್ಲೇಝರ್ನಲ್ಲೇ ಮನೆಗೆ ಮರಳುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಏನಿದು ವಿವಾದ?
ಧನ್ಬಾದ್ನ ಕಾರ್ಮೆಲ್ ಸ್ಕೂಲ್ನಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರು ‘ಪೆನ್ ಡೇ’ ಆಚರಣೆ ಮಾಡುತ್ತಿದ್ದರು. ಪೆನ್ ಡೇ ಅಂದ್ರೆ 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ನೀಡುವ ಬೀಳ್ಕೊಡುಗೆ ಸಮಾರಂಭ. ಈ ಸಂಭ್ರಮದ ಕಾರ್ಯಕ್ರಮಕ್ಕೆ ವಿದ್ಯಾರ್ಥಿನಿಯರು ಟೀ ಶರ್ಟ್ಗಳ ಮೇಲೆ ಪೆನ್ ಡೇ ಅನ್ನೋ ಬರಹಗಳನ್ನ ಬರೆಸಿದ್ದರು. ಇದು ಮಹಿಳಾ ಪ್ರಿನ್ಸಿಪಾಲರ ಕೆಂಗಣ್ಣಿಗೆ ಗುರಿಯಾಗಿದ್ದು, ಕಠಿಣ ಕ್ರಮ ಕೈಗೊಂಡಿದ್ದಾರೆ.
ಪೋಷಕರು ಹೇಳೋದೇನು?
ವಿದ್ಯಾರ್ಥಿನಿಯರ ಪೋಷಕರು ಪ್ರಿನ್ಸಿಪಾಲ್ ವಿರುದ್ಧ ದೂರು ನೀಡಿದ್ದಾರೆ. 10ನೇ ತರಗತಿ ವಿದ್ಯಾರ್ಥಿನಿಯರು ಪರೀಕ್ಷೆಗೂ ಮುನ್ನ ಶಾಲೆಯಲ್ಲಿ ಪೆನ್ ಡೇ ಅನ್ನೋ ಕಾರ್ಯಕ್ರಮ ನಡೆಸಿದ್ದರು. ಶಾಲೆಗೆ ಕೊನೇ ದಿನವಾಗಿದ್ದರಿಂದ ಈ ಟೀ ಶರ್ಟ್ಗಳನ್ನು ಧರಿಸಿದ್ದರು. ಇಷ್ಟಕ್ಕೆ ಸಿಟ್ಟಿಗೆದ್ದ ಪ್ರಾಂಶುಪಾಲರು 80 ವಿದ್ಯಾರ್ಥಿನಿಯರ ಶರ್ಟ್ ತೆಗೆದು ಬ್ಲೇಜರ್ನಲ್ಲಿ ಮನೆಗೆ ಹೋಗುವಂತೆ ಹೇಳಿದ್ದಾರೆ.
ತನಿಖೆಗೆ ಡಿಸಿ ಆದೇಶ!
ಧನ್ಬಾದ್ ಕಾರ್ಮೆಲ್ ಶಾಲೆಯ ಟೀ ಶರ್ಟ್ ವಿವಾದ ಸಂಚಲನ ಮೂಡಿಸಿದೆ. ವ್ಯಾಪಕ ಟೀಕೆಗೆ ಗುರಿಯಾದ ಮೇಲೆ ಧನ್ಬಾದ್ ಜಿಲ್ಲಾಧಿಕಾರಿ ಈ ಕುರಿತ ಉನ್ನತ ತನಿಖೆಗೆ ಸೂಚಿಸಿದ್ದಾರೆ. ಡಿಸಿ ಮಾಧ್ವಿ ಮಿಶ್ರಾ ಅವರು ಪ್ರಿನ್ಸಿಪಾಲ್ ವಿರುದ್ಧದ ಈ ಆರೋಪಕ್ಕೆ 5 ಸದಸ್ಯರ ಕಮಿಟಿ ರಚಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






