ನೀವೂ BSNL ಗ್ರಾಹಕರಾ!? ಹಾಗಿದ್ರೆ ನಿಮಗಿದೆ ಹೋಳಿ ಹಬ್ಬದ ಆಫರ್! ಏನು ಅಂತೀರಾ!

ಮಾರ್ಚ್ 8, 2025 - 08:01
 0  12
ನೀವೂ BSNL ಗ್ರಾಹಕರಾ!? ಹಾಗಿದ್ರೆ ನಿಮಗಿದೆ ಹೋಳಿ ಹಬ್ಬದ ಆಫರ್! ಏನು ಅಂತೀರಾ!

ನೀವು BSNL ಗ್ರಾಹಕರಾಗಿದ್ದರೆ ನಿಮಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. BSNL ತನ್ನ 9 ಕೋಟಿಗೂ ಹೆಚ್ಚು ಗ್ರಾಹಕರಿಗೆ ಹೋಳಿ ಹಬ್ಬದ ಧಮಾಕಾ ಕೊಡುಗೆ ಪರಿಚಯಿಸಿದೆ. 

ಪ್ರಸ್ತುತ ಸರ್ಕಾರೀ ಸೌಮ್ಯದ ಟೆಲಿಕಾಂ ಕಂಪನಿ ಗ್ರಾಹಕರ ಕೈಗೆಟಕುವ ಮತ್ತು ಬಜೆಟ್‌ಗೆ ಅನುಗುಣವಾಗಿ ಸುಮಾರು 2 ದಿನಗಳ ವ್ಯಾಲಿಡಿಟಿಯಿಂದ 365 ದಿನಗಳ ವ್ಯಾಲಿಡಿಟಿಯವರೆಗೆ ಎಲ್ಲಾ ರೀತಿಯ ಅಗತ್ಯಗಳಿಗೆ ಸರಿಹೊಂದುವಂತೆ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. 

1499 ರೀಚಾರ್ಜ್​ ಪ್ಲಾನ್​ನಲ್ಲಿ ವರ್ಷದ 365 ದಿನಗಳವರೆಗೂ ವಿಶೇಷ ಪ್ಯಾಕೇಜ್ ಸಿಗಲಿದೆ. ಅನಿಯಮಿತ ಟಾಕ್‌ಟೈಮ್, ಡೇಟಾ ಪ್ರಯೋಜನ ಸಿಗಲಿದೆ. 29 ದಿನಗಳ ಹೆಚ್ಚುವರಿ ಉಚಿತ ಮಾನ್ಯತೆ ಇದೆ ಎಂದು ಕಂಪನಿಯು X ನಲ್ಲಿ ತಿಳಿಸಿದೆ.

ಏನೆಲ್ಲ ಸಿಗಲಿದೆ..?

ಗ್ರಾಹಕರು 1499 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕು
 ಅನಿಯಮಿತ ವಾಯ್ಸ್ ಕರೆ, ದಿನಕ್ಕೆ 100 ಎಸ್‌ಎಂಎಸ್
 ಜೊತೆಗೆ 24 ಜಿಬಿ ಡೇಟಾ ಸಿಗಲಿದೆ, ಹೆಚ್ಚಿನ ಡೇಟಾ ಸಿಗಲ್ಲ
 ಆದರೆ 365 ದಿನಗಳವರೆಗೆ ಅನಿಯಮಿತ ಕರೆ ಮಾಡಬಹುದು
 ಹಿಂದಿನ ಪ್ಲಾನ್​ನಲ್ಲಿ 345 ದಿನಗಳವರೆಗೆ ವ್ಯಾಲಿಡಿಟಿ ಇತ್ತು

ಅಂದ್ಹಾಗೆ ಈ ಕೊಡುಗೆ ಮಾರ್ಚ್ 31 ರವರೆಗೆ ಮಾತ್ರ ಇರಲಿದೆ. 1499 ರೂಪಾಯಿ ಪ್ಲಾನ್​ನಲ್ಲಿ ಬಯಸೋರು ಈಗಲೇ ರೀಚಾರ್ಜ್ ಮಾಡಿಕೊಳ್ಳಬಹುದು. BSNL ವೆಬ್‌ಸೈಟ್ ಮತ್ತು BSNL ಸೆಲ್ಫ್‌ಕೇರ್ ಅಪ್ಲಿಕೇಶನ್‌ನಿಂದ ರೀಚಾರ್ಜ್ ಮಾಡಬಹುದು.

ಇದಲ್ಲದೆ ಮತ್ತೊಂದು ಹೆಚ್ಚುವರಿ ಮಾನ್ಯತೆ ಇರುವ ಪ್ಲಾನ್ ನೀಡುವುದಾಗಿ ಕಂಪನಿ ಘೋಷಿಸಿದೆ. 2,399 ರೂಪಾಯಿಗಳ ರೀಚಾರ್ಜ್ ಮಾಡಿಸಿದ್ರೆ 30 ದಿನಗಳ ಹೆಚ್ಚುವರಿ ಮಾನ್ಯತೆ ಸಿಗಲಿದೆ. ಈ ಹಿಂದೆ ಈ ಯೋಜನೆ 395 ದಿನಗಳವರೆಗೆ ವ್ಯಾಲಿಡಿಟಿ ಹೊಂದಿತ್ತು. ಈಗ ಅದನ್ನು 425 ದಿನಗಳವರೆಗೆ ವಿಸ್ತರಿಸಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ 9 ಕೋಟಿಗೂ ಹೆಚ್ಚು ಮೊಬೈಲ್ ಬಳಕೆದಾರರಿಗೆ ಗುಡ್​ನ್ಯೂಸ್​ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow