ಪುಷ್ಪ 2’ ನಂತರ ‘ಪುಷ್ಪ 3: ಚಿತ್ರೀಕರಣ ಪ್ರಾರಂಭ ಯಾವಾಗ!?

ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ರಿಲೀಸ್ ಆಗಿದೆ. ಇದೇ ವೇಳೆ ಪುಷ್ಪ 3 ಸಿನಿಮಾದ ಕುರಿತು ಕೂಡಾ ಸಖತ್ ಅಪ್ಡೇಟ್ಸ್ ವೈರಲ್ ಆಗುತ್ತಿದೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಕೂಡಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಪುಷ್ಪ 3 ಸಿನಿಮಾದ ಕುರಿತು ಹಿಂಟ್ ಕೊಟ್ಟಿದ್ದರು. ಈಗ ಪುಷ್ಪ 3 ಸಿನಿಮಾ ಕುರಿತು ಮತ್ತೊಂದು ವಿಶೇಷವಾದ ಅಪ್ಡೇಟ್ ವೈರಲ್ ಆಗಿದೆ.
ಪುಷ್ಪ 2’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ ದಾಖಲೆ ಮೊತ್ತದ ಕಲೆಕ್ಷನ್ ಅನ್ನು ಸಿನಿಮಾ ಮಾಡಿದ್ದು, ಮೊದಲ ದಿನದ ಕಲೆಕ್ಷನ್ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. 2021 ರಲ್ಲಿ ಮೊದಲ ಭಾಗ ಬಿಡುಗಡೆ ಆಗಿತ್ತು, ಅದಾದ ಮೂರು ವರ್ಷದ ಬಳಿಕ ಈಗ ಎರಡನೇ ಭಾಗ ಬಿಡುಗಡೆ ಆಗಿದೆ. ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಸಿನಿಮಾದ ಮೂರನೇ ಭಾಗವೂ ಬರುತ್ತಿರುವುದಾಗಿ ನಿರ್ದೇಶಕ ಸುಕುಮಾರ್ ಸುಳಿವು ನೀಡಿದ್ದಾರೆ. ‘ಪುಷ್ಪ 3’ ಸಿನಿಮಾ ಬರಲಿರುವುದು ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಖುಷಿ ತಂದಿದೆ. ಆದರೆ ‘ಪುಷ್ಪ 3’ ಸಿನಿಮಾದ ಶೂಟಿಂಗ್ ಯಾವಾಗ ಪ್ರಾರಂಭ ಆಗಲಿದೆ?
ಪುಷ್ಪ’ ಸಿನಿಮಾ 2021 ರಲ್ಲಿ ಬಿಡುಗಡೆ ಆಗಿತ್ತು. ಅದಾದ ಒಂದೂವರೆ ವರ್ಷದ ಬಳಿಕ ಅಂದರೆ ಆಗಸ್ಟ್ ತಿಂಗಳಲ್ಲಿ ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಿತ್ತು. ಎರಡು ವರ್ಷಗಳ ಕಾಲ ಸಿನಿಮಾದ ಚಿತ್ರೀಕರಣ ನಡೆದು ಈಗ ಸಿನಿಮಾ ಬಿಡುಗಡೆ ಆಗಿದೆ. ಇನ್ನು ‘ಪುಷ್ಪ 3’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲು ಇನ್ನೂ ತಡವಾಗಲಿದೆ ಎನ್ನಲಾಗುತ್ತಿದೆ. ಸಿನಿಮಾದ ಕತೆಯ ಎಳೆಯಷ್ಟೆ ಈಗ ಸುಕುಮಾರ್ ಬಳಿ ಇದ್ದು, ಪೂರ್ಣ ಚಿತ್ರಕತೆ ಇನ್ನೂ ರೆಡಿಯಾಗಿಲ್ಲವಂತೆ ಹಾಗಾಗಿ ‘ಪುಷ್ಪ 3’ ಸಿನಿಮಾದ ಚಿತ್ರೀಕರಣ ತಡವಾಗಲಿದೆ.
ಪುಷ್ಪ’ ಸಿನಿಮಾ ಬಿಡುಗಡೆ ಬಳಿಕ ನಿರ್ದೇಶಕ ಸುಕುಮಾರ್, ವಿಜಯ್ ದೇವರಕೊಂಡ ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದರು. ಆ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡುವುದಾಗಿ ಹೇಳಿದ್ದರು. ಆ ಸಿನಿಮಾದ ಚಿತ್ರೀಕರಣ ಮುಗಿದ ಬಳಿಕವಷ್ಟೆ ಸುಕುಮಾರ್ ‘ಪುಷ್ಪ 3’ ಸಿನಿಮಾ ಪ್ರಾರಂಭಿಸಲಿದ್ದಾರೆ. ಅಲ್ಲು ಅರ್ಜುನ್ ಕೈಯಲ್ಲಿ ಪ್ರಸ್ತುತ ಎರಡು ಸಿನಿಮಾಗಳಿದ್ದು ಆ ಸಿನಿಮಾಗಳು ಮುಗಿದ ಬಳಿಕವಷ್ಟೆ ‘ಪುಷ್ಪ 3’ ಸಿನಿಮಾಕ್ಕೆ ಅವರು ಲಭ್ಯ ಆಗಲಿದ್ದಾರೆ.
ಹಾಗಾಗಿ ‘ಪುಷ್ಪ 3’ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗಲು ಇನ್ನೂ ಕನಿಷ್ಟ ಎರಡರಿಂದ ಮೂರು ವರ್ಷ ಬೇಕಾಗಲಿದೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿರುವ ಸಿನಿಮಾ ಮುಗಿಸಲಿರುವ ಸುಕುಮಾರ್ ಆ ಬಳಿಕ ‘ಪುಷ್ಪ 3’ ಪ್ರಾರಂಭಿಸಲಿದ್ದಾರಂತೆ. ಅಂದಹಾಗೆ ‘ಪುಷ್ಪ 3’ ಸಿನಿಮಾನಲ್ಲಿ ಅಲ್ಲು ಅರ್ಜುನ್ ಎದುರು ವಿಜಯ್ ದೇವರಕೊಂಡ ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಿನ್ನೂ ಖಾತ್ರಿ ಆಗಿಲ್ಲ. ಆದರೆ ಪವರ್ ಫುಲ್ ವಿಲನ್ ಅನ್ನೇ ಪುಷ್ಪನಿಗೆ ಎದುರಾಗಿ ಸುಕುಮಾರ್ ಕರೆತರುವುದು ಪಕ್ಕಾ ಎನ್ನಲಾಗುತ್ತಿದ್ದು, ಅದರ ಸಣ್ಣ ಝಲಕ್ ಒಂದನ್ನು ‘ಪುಷ್ಪ 2’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ನೀಡಿದ್ದಾರೆ.
ಅಲ್ಲು ಅರ್ಜುನ್ ಇದೀಗ ತ್ರಿವಿಕ್ರಮ್ ಸಿನಿಮಾದಲ್ಲಿ ನಟಿಸಲಿದ್ದಾರೆ. ತ್ರಿವಿಕ್ರಮ್ ಜೊತೆಗೆ ಇದು ಅವರ ನಾಲ್ಕನೇ ಸಿನಿಮಾ ಆಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






