ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಷನ್ : ಐಶ್ವರ್ಯಾ, ಚೈತ್ರಾ ಇಬ್ಬರಲ್ಲಿ ಔಟ್ ಆಗೋದು ಯಾರು..?

ಡಿಸೆಂಬರ್ 8, 2024 - 20:12
 0  16
ಬಿಗ್ಬಾಸ್ ಮನೆಯಲ್ಲಿ ಎಲಿಮಿನೇಷನ್ : ಐಶ್ವರ್ಯಾ, ಚೈತ್ರಾ ಇಬ್ಬರಲ್ಲಿ ಔಟ್ ಆಗೋದು ಯಾರು..?

  ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಸಖತ್‌ ಗರಂ ಆಗಿದ್ದಾರೆ. ಹಿಂದಿನ ವಾರ ಶೋಭಾ ಶೆಟ್ಟಿ ಅವರು ಮನೆಯಿಂದ ಆಚೆ ಹೋಗಿರೋಗೊದು ಗೊತ್ತೇ ಇದೆ. ತ್ರಿವಿಕ್ರಮ್‌ ಹಾಗೂ ಐಶ್ವರ್ಯಾ ಇಬ್ಬರಲ್ಲಿ ಒಬ್ಬರು ಔಟ್‌ ಆಗಬೇಕಿತ್ತು. ಆದರೆ ಶೋಭಾ ಶೆಟ್ಟಿ ಅವರು ಕ್ವಿಟ್‌ ಮಾಡಿ ಹೋದರು.  ಇದೀಗ ಈ ವಾರದ ಬಿಗ್ ಬಾಸ್ ಎಲಿಮಿನೇಷನ್​ ಬಗ್ಗೆ ಸುಳಿವು ಸಿಕ್ಕಿದೆ. ಅದಕ್ಕೆ ಸಂಬಂಧಿಸಿದ ಪ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡಿದೆ.

ಚೈತ್ರಾ ಮತ್ತು ಐಶ್ವರ್ಯಾ ಇಬ್ಬರೂ ಕೂಡ ಎಲಿಮಿನೇಟ್ ಆಗುವ ಹಂತಕ್ಕೆ ಬಂದಿದ್ದಾರೆ. ‘ನೀವು ಹೊರಗೆ ಹೋಗಲು ಬೇರೆ ದಾರಿ ಇದೆ’ ಎಂದು ಸುದೀಪ್​ ಹೇಳಿದ್ದಾರೆ.   ಚೈತ್ರಾ ಕುಂದಾಪುರಗೆ ಕನ್ಫೆಷನ್ ರೂಮ್​ಗೆ ಕಳುಹಿಸಲಾಗಿದೆ. ಐಶ್ವರ್ಯಾ ಅವರನ್ನು ಆಕ್ಟಿವಿಟಿ ರೂಮ್​ಗೆ ಕಳುಹಿಸಿಲಾಗಿದೆ. ಆಗ ಇವರಲ್ಲಿ ಸೇಫ್​ ಆದ ಸ್ಪರ್ಧಿ ಮನೆ ಒಳಗಡೆ ಹೋಗ್ತೀರಿ, ಸೇಫ್​ ಆಗದೇ ಇರೋರು ವೇದಿಕೆ ಮೇಲೆ ಬರುತ್ತೀರಿ ಅಂತ ಹೇಳಿದ್ದಾರೆ.  ಆದರೆ ಇದರ ಮಧ್ಯೆ ಶುಕ್ರವಾರದವರೆಗೂ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ.

ಹೀಗಾಗಿ ಈ ವಾರ ಎಲಿಮಿನೇಷನ್ ಇಲ್ವಾ ಅಂತ ವೀಕ್ಷಕರಲ್ಲಿ ಅನುಮಾನ ಮೂಡಿದೆ. ಇದರ ಮಧ್ಯೆ ಕಿಚ್ಚ ಸುದೀಪ್ 2 ಸ್ಪರ್ಧಿಗಳನ್ನು ಬಾಟಂ 2ಕ್ಕೆ ತಂದು ನಿಲ್ಲಿಸಿ ಅನುಮಾನ ಮೂಡಿಸಿದ್ದಾರೆ.   ಚೈತ್ರಾ ಅವರು ಬಿಗ್ ಬಾಸ್ ಹೇಳೋ ತನಕ ಕನ್ಫೆಷನ್‌ ರೂಮ್‌ನಿಂದ ಹೊರಗೆ ಬರುವಂತಿಲ್ಲ. ಅಲ್ಲಿಂದನೇ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ಇರೋದನ್ನೆಲ್ಲಾ ನೋಡ್ತಾ ಇರ್ತಾರೆ. ಚೈತ್ರಾ ಕುಂದಾಪುರ ಅವರೇ ಬಿಗ್ ಬಾಸ್ ಮನೆಯಿಂದ ಔಟ್ ಆದರು ಅಂತಾನೇ ಎಲ್ಲರೂ ಭಾವಿಸಿದ್ದಾರೆ.ಆದ್ರೆ ನಿಜವಾಗಲ್ಊ ಯಾರ್ ಹೋಗ್ತಾರೆ ಎಂದು ಕಾದುನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow