ರೇಣುಕಾಸ್ವಾಮಿ ಕೊಲೆ ಕೇಸ್: ಇಂದು ನಟ ದರ್ಶನ್ & ಪವಿತ್ರಾ ಗೌಡ ಜಾಮೀನು ಭವಿಷ್ಯ ನಿರ್ಧಾರ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಜೈಲು ಸೇರಿದ್ರು. ಮಧ್ಯಂತರ ಜೈಲು ಪಡೆದು ನಟ ದರ್ಶನ್ ಹೊರಗೆ ಬಂದಿದ್ದಾರೆ. ಕಳೆದ ಶುಕ್ರವಾರ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಏಕಸದಸ್ಯ ಪೀಠ, ಸರ್ಕಾರ ಪರ ವಕೀಲರಾದ ಪ್ರಸನ್ನಕುಮಾರ ವಾದ ಆಲಿಸಿ ಇಂದಿಗೆ ಮುಂದೂಡಿತ್ತು. ದರ್ಶನ್ ಸೇರಿದಂತೆ ಇತರೆ 6 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಾಗಿತ್ತು. ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಮಾಡಿದ್ದ ವಾದಕ್ಕೆ ಪ್ರಸನ್ನ ಕುಮಾರ್ ಪ್ರತಿವಾದಿಸಿದ್ರು. ಇಂದು ಮಧ್ಯಾಹ್ನ 2.30ಕ್ಕೆ ಬೇಲ್ ಅರ್ಜಿ ವಿಚಾರಣೆ ನಡೆಸಲಿದೆ. ದರ್ಶನ್ ಮಧ್ಯಂತರ ಜಾಮೀನಿನ ಅವಧಿ ಕೂಡ ಡಿಸೆಂಬರ್ 11ಕ್ಕೆ ಮುಕ್ತಾಯ ಆಗಲಿದ್ದು ಜಾಮೀನು ಸಿಗುತ್ತಾ ಅಂತಾ ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






