ನಟ ದರ್ಶನ್ ಈ ಸಿನಿಮಾದಲ್ಲಿ ನಟಿಸಲ್ವಾ..? ಅಡ್ವಾನ್ಸ್ ಹಣ ವಾಪಸ್ ಕೊಟ್ರಾ “ಕಾಟೇರ”

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಆರಂಭದಲ್ಲಿ ದರ್ಶನ್ಗೆ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ಕೊಟ್ಟಿರಲಿಲ್ಲ, ಬಳಿಕ ಅವರಿ ಮೈಸೂರಿಗೆ ತೆರಳಲು ಅನುಮತಿ ನೀಡಿತ್ತು.
ಬಳ್ಳಾರಿ ಜೈಲಿನಲ್ಲಿರುವಾಗಲೇ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಮಧ್ಯಂತರ ಜಾಮೀನು ಪಡೆದಿದ್ದರು.ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಈಗ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಂಡ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ.
ಆದ್ರೆ ಇದರ ಮದ್ಯೆ ಒಂದು ಶಾಕಿಂಕ್ ನ್ಯೂಸ್ ಕೇಳಿ ಬಂದಿದೆ. ದರ್ಶನ್ ಈ ಹಿಂದೆ ಸಿನಿಮಾಗಳಿಗಾಗಿ ಪಡೆದಿದ್ದ ಅಡ್ವಾನ್ಸ್ ಹಣವನ್ನು ಮರಳಿಸಲಿದ್ದಾರೆ ಎನ್ನಲಾಗುತ್ತಿದೆ. ಕೆವಿಎನ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ದರ್ಶನ್ ನಟಿಸಲಿಕ್ಕಿದ್ದರು, ಈ ಸಿನಿಮಾವನ್ನು ಪ್ರೇಮ್ ನಿರ್ದೇಶನ ಮಾಡುವುದಾಗಿ ಘೋಷಣೆ ಸಹ ಆಗಿತ್ತು.
ಆದರೆ ಆ ಸಿನಿಮಾದ ಅಡ್ವಾನ್ಸ್ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ತೆಲುಗಿನ ನಿರ್ಮಾಪಕರೊಬ್ಬರಿಗೆ ಸಹ ಸಿನಿಮಾ ಒಪ್ಪಂದ ಮಾಡಿಕೊಂಡಿದ್ದರು. ಆ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗಿದೆ. ನಿರ್ಮಾಪಕ ಸೂರಪ್ಪ ಬಾಬು ನಿರ್ಮಿಸಲಿರುವ ಸಿನಿಮಾದಲ್ಲಿ ನಟಿಸಲೆಂದು ದರ್ಶನ್ ಅಡ್ವಾನ್ಸ್ ಹಣ ಪಡೆದಿದ್ದರು.
ಈ ಹಣವನ್ನು ದರ್ಶನ್ ಮರಳಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸುದ್ದಿಯನ್ನು ಸೂರಪ್ಪ ಬಾಬು ತಳ್ಳಿಹಾಕಿರುವ ಸೂರಪ್ಪ ಬಾಬು, ದರ್ಶನ್ ತಮಗೆ ಹಣ ಮರಳಿಸಿಲ್ಲ ಎಂದಿದ್ದಾರೆ. ಇನ್ನು ‘ಡೆವಿಲ್’ ಸಿನಿಮಾದ ಚಿತ್ರೀಕರಣ ಅರ್ಧದಷ್ಟು ಈಗಾಗಲೇ ಮುಗಿದಿರುವ ಕಾರಣ ಆ ಸಿನಿಮಾವನ್ನು ದರ್ಶನ್ ಪೂರ್ತಿ ಮಾಡಿಕೊಡಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






