ಎಲ್ಲಾ ಮಾದರಿ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ Team India ಆಟಗಾರ..!

ಫೆಬ್ರವರಿ 3, 2025 - 09:07
 0  11
ಎಲ್ಲಾ ಮಾದರಿ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ Team India ಆಟಗಾರ..!

ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾ ರಣಜಿ ಟ್ರೋಫಿ ಪಂದ್ಯಗಳ ನಂತರ ಎಲ್ಲಾ ರೀತಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ ವೃದ್ಧಿಮಾನ್ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ. ವೇಳೆ 142 ಪಂದ್ಯಗಳನ್ನಾಡಿರುವ ಅವರು 14 ಶತಕಗಳೊಂದಿಗೆ ಒಟ್ಟು 7169 ರನ್ ಕಲೆಹಾಕಿದ್ದಾರೆ.

ಮೂಲಕ 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ವೃದ್ಧಿಮಾನ್ ಸಾಹ ನಿರ್ಧರಿಸಿದ್ದಾರೆ. ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ. ಇನ್ನು 2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೇಳೆ 56 ಇನಿಂಗ್ಸ್ ಆಡಿರುವ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ.

ಹಾಗೆಯೇ ಭಾರತದ ಪರ 9 ಏಕದಿನ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿರುವ ಸಾಹ ಕೇವಲ 41 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 2014 ಬಳಿಕ ಅವರಿಗೆ ಭಾರತ ಏಕದಿನ ತಂಡದಲ್ಲಿ ಚಾನ್ಸ್ ಸಿಕ್ಕಿರಲಿಲ್ಲ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow