Darshan Case: ಜೈಲಲ್ಲಿ ಖೈದಿಗಳು ಸಿಗರೇಟ್​ ಸೇದುವ ಹಾಗಿಲ್ಲ; ಸುಪ್ರೀಂ ಖಡಕ್​ ವಾರ್ನಿಂಗ್

ಆಗಸ್ಟ್ 14, 2025 - 11:57
 0  16
Darshan Case: ಜೈಲಲ್ಲಿ ಖೈದಿಗಳು ಸಿಗರೇಟ್​ ಸೇದುವ ಹಾಗಿಲ್ಲ; ಸುಪ್ರೀಂ ಖಡಕ್​ ವಾರ್ನಿಂಗ್

ಬೆಂಗಳೂರು: ರೇಣುಕಾಸ್ವಾಮಿ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳ ಜಾಮೀನು ಅನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲಾ, ಆರ್. ಮಹಾದೇವನ್ ಪೀಠ ಈ ಮಹತ್ವದ ಆದೇಶ ನೀಡಿದ್ದಾರೆ. ಅಲ್ಲದೇ ಈ ಕೂಡಲೇ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಜೈಲಿಗೆ ಹೋಗಬೇಕಿದೆ. 

ಸುಪ್ರೀಂಕೋರ್ಟ್​​ನ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಆರ್.ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ಪ್ರಕರಣ ವಿಚಾರಣೆ ಮಾಡಿದ್ದು, ಆರೋಪಿ ಎಷ್ಟೇ ದೊಡ್ಡವರಿದ್ದರೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್​ಮೆಂಟ್ ನೀಡಲಾಗಿದೆ. ಜೈಲು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು ಎಂದು ಹೇಳಿದರು.

ಇನ್ನು ಮುಂದೆ ರಾಜ್ಯಾತಿಥ್ಯದ ಯಾವುದೇ ಫೋಟೋ, ವಿಡಿಯೋ ಕಂಡು ಬಂದರೆ, ಆರೋಪಿ ಜೈಲಿನ ಲಾನ್​ನಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಇದು ಲ್ಯಾಂಡ್ ಮಾರ್ಕ್ ತೀರ್ಪು. ಈ ತೀರ್ಪಿನ ಪ್ರತಿ ಎಲ್ಲಾ ಹೈಕೋರ್ಟ್​ಗಳಿಗೆ ಮತ್ತು ಜೈಲುಗಳಿಗೂ ಕಳುಹಿಸುವಂತೆ ಸುಪ್ರೀಂಕೋರ್ಟ್ ಖಡಕ್​ ಸೂಚನೆ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow