BBK11: ಬಿಗ್ ಮನೆಗೆ ಧನರಾಜ್ ಅವರ ಕೂಡು ಕುಟುಂಬ ಎಂಟ್ರಿ: ಪತಿ ಮೇಲೆ ಪತ್ನಿಯ ಸ್ವೀಟ್ ಮುನಿಸು!

ಬಿಗ್ಬಾಸ್ ಮನೆ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ವೀಕ್ಷಕರಿಗೆ ಸ್ಪೆಷಲ್ ಮನರಂಜನೆಯ ಬೂಸ್ಟ್ ಸಿಗ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗ್ತಿದೆ.
ದೊಡ್ಮನೆಯಲ್ಲಿ ಫ್ಯಾಮಿಲಿ ರೌಂಡ್ ಜೋರಾಗಿಯೇ ಇದೆ. ಎಲ್ಲ ಸ್ಪರ್ಧಿಗಳ ಮನೆಯ ಸದಸ್ಯರು ಬಂದಿದ್ದಾರೆ. ಮನೆಯಲ್ಲಿಯೇ ಒಂದೊಂದು ದಿನ ಇದ್ದು ಹೋಗಿದ್ದಾರೆ. ಇದರ ಮಧ್ಯೆ ಧನರಾಜ್ ಆಚಾರ್ ಫ್ಯಾಮಿಲಿ ಬಂದಿದೆ. ಇವರ ಫ್ಯಾಮಿಲಿ ತುಂಬಾನೆ ದೊಡ್ಡದಿದೆ. ಮನೆಯ ಅಷ್ಟು ಸದಸ್ಯರು ಬಂದಿದ್ದಾರೆ. ಮನೆಯ ಗಾರ್ಡನ್ ಏರಿಯಾದಲ್ಲಿ ಹುಲಿ ಡ್ಯಾನ್ಸ್ ಮಾಡಿದ್ದಾರೆ. ಪತ್ನಿ ಕೂಡ ಬಂದು ಧನರಾಜ್‌ರನ್ನ ಸಿಕ್ಕಾಪಟ್ಟೆ ಪ್ರೀತಿಯಿಂದ ಹೊಡೆದಿರೋದು ಇದೆ.
ಕುಟುಂಬದ ಸದಸ್ಯರನ್ನು ನೋಡಿದ ಧನರಾಜ್ ಫುಲ್ ಖುಷ್ ಆಗಿದ್ದಾರೆ. ಅವರ ಪತ್ನಿ ಪ್ರಜ್ಞಾ ತಮ್ಮದೇ ಸ್ಟೈಲ್ನಲ್ಲಿ ಪತಿಯ ಕಾಲೆಳೆದು ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶು ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶುಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎಂದು ಬಾರಿಸಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.
ಅದಲ್ಲದೇ ಧನರಾಜ್ ಅವರ ಕೂಡು ಕುಟುಂಬ ಮನೆಗೆ ಎಂಟ್ರಿ ನೀಡಿದೆ. ಬಿಗ್ಬಾಸ್ ಮನೆಗೆ ಬಂದಿರುವ ಸದಸ್ಯರು ಹಲಿ ಕುಣಿತಕ್ಕೆ ಹೆಜ್ಜೆ ಹಾಕಿದೆ. ವಿಶೇಷವಾಗಿ ಧನರಾಜ್ ಅವರ ಮಗುವನ್ನು ಕೂಡ ಬಿಗ್ಬಾಸ್ ಮನೆಗೆ ಬಂದಿದೆ. ಇಂದು ರಾತ್ರಿ ಧನರಾಜ್ ದಂಪತಿಗೆ ಸಂಬಂಧಿಸಿದ ಎಪಿಸೋಡ್ ಪ್ರಸಾರ ಆಗಲಿದ್ದು, ವೀಕ್ಷಕರು ಕಾತುರರಾಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






