ಸುದೀಪ್ ಸರ್ ಜಗದೀಶ್ ಪರ ನಿಂತಿದ್ದು ತಪ್ಪು: ಕಿಚ್ಚನ ಬಗ್ಗೆ ಚೈತ್ರಾ ಬೇಸರ!

ಅಕ್ಟೋಬರ್ 21, 2024 - 18:07
 0  25
ಸುದೀಪ್ ಸರ್ ಜಗದೀಶ್ ಪರ ನಿಂತಿದ್ದು ತಪ್ಪು: ಕಿಚ್ಚನ ಬಗ್ಗೆ ಚೈತ್ರಾ ಬೇಸರ!

ಬಿಗ್ ಬಾಸ್ ಸೀಸನ್ 11 ರಲ್ಲಿ ಮೂರನೇ ವಾರದಲ್ಲಿ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಮಾತನಾಡಿ ಎಲಿಮಿನೇಟ್ ಆದ ಜಗದೀಶ್ ಪರ ಕಿಚ್ಚ ಮಾತನಾಡಿದ್ದು, ಚೈತ್ರಾ ಕುಂದಾಪುರ್ ಗೆ ಬೇಸರ ತರಿಸಿದೆ. 

ಸುದೀಪ್ ಅವರು ವೀಕೆಂಡ್​ನಲ್ಲಿ ಜಗದೀಶ್ ಅವರ ಪರವಾಗಿ ಮಾತನಾಡಿದರು. ಜಗದೀಶ್ ಹೇಳಿದ್ದು ಸರಿ ಅಲ್ಲ ಎಂದು ಹೇಳಿದ ಸುದೀಪ್​, ಎಲ್ಲರೂ ಅವರನ್ನು ತಡೆಯಬಹುದಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದರು. ಈ ಬಗ್ಗೆ ಎಲ್ಲರಿಗೂ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನು ಮನೆ ಮಂದಿ ಖಂಡಿಸಿದ್ದಾರೆ.

ಈ ಬಗ್ಗೆ ಚೈತ್ರಾ ಮಾತನಾಡಿದ್ದಾರೆ. ‘ನೀನು ನನಗೆ ಕೆಸರು ಎರಚಿದರೆ ನಾನು ಕೂಡ ಕೆಸರನ್ನೇ ಎರಚೋದು. ಆ ವ್ಯಕ್ತಿಗೆ ನಾನು ಗುಲಾಬಿ ಎಸೆಯೋಕಾಗಲ್ಲ. ಆ ವ್ಯಕ್ತಿ ಬಗ್ಗೆ ನನಗೇಕೆ ಅಷ್ಟು ಕ್ಲ್ಯಾರಿಟಿ ಕೊಡ್ತಾರೆ? ಸುದೀಪ್ ಸ್ಪರ್ಧಿಗಳಿಗೆ ಬೈದರು ಅನ್ನೋದನ್ನು ಮಾತ್ರ ಜನರು ನೆನಪಿಟ್ಟುಕೊಳ್ಳುತ್ತಾರೆ. ಮಧ್ಯ ಮಧ್ಯದಲ್ಲಿ ಸೇರಿಸಿದ ಲೈನ್​ನ ಜನರು ನೆನಪಿಟ್ಟುಕೊಳ್ಳಲ್ಲ’ ಎಂದಿದ್ದಾರೆ.

ಕೈ ಮುಗಿದು ಪೂಜೆ ಮಾಡುವ ಕಲ್ಲಿಗೂ, ಎಲ್ಲೋ ಬಿದ್ದ ಕಲ್ಲಿಗೂ ವ್ಯತ್ಯಾಸ ಇರುತ್ತದೆ. ರೋಡ್​ನಲ್ಲಿರೋ ಕಲ್ಲಿಗೆ ಉಗಿದೆ ಎಂದ ಮಾತ್ರಕ್ಕೆ ನಾನು ತಪ್ಪಿತಸ್ಥೆ ಆಗಲ್ಲ. ನನ್ನ ಮಾತನ್ನು ಕಂಪ್ಲೀಟ್ ಮಾಡೋಕೆ ಬಿಡಬೇಕು. ಇಡೀ ಮನೆಯನ್ನು ವಿಲನ್ ಮಾಡಿದ್ದಾರೆ. ಅವರು ವಿಚಾರದಲ್ಲಿ ನೀವು ಮಾಡಿದ್ದು ತಪ್ಪು ಅಂದಿದ್ದಾರೆ. ಅದು ಸರಿ ಅಲ್ಲ’ ಎಂದು ಚೈತ್ರಾ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow