ಬಿಜೆಪಿ ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡ್ತಿರೋದರ ಹಿಂದೆ ಬೇರೆ ಉದ್ದೇಶ ಇದೆ: HM ರೇವಣ್ಣ!

ಜುಲೈ 18, 2025 - 16:14
 0  15
ಬಿಜೆಪಿ ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡ್ತಿರೋದರ ಹಿಂದೆ ಬೇರೆ ಉದ್ದೇಶ ಇದೆ: HM ರೇವಣ್ಣ!

ಬೆಂಗಳೂರು:- ಬಿಜೆಪಿ ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡ್ತಿರೋದರ ಹಿಂದೆ ಬೇರೆ ಉದ್ದೇಶ ಇದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ HM ರೇವಣ್ಣ ಹೇಳಿದ್ದಾರೆ. 

ಬಿಹಾರದಲ್ಲಿ  ಎನ್‌ಡಿಯು  ಪಕ್ಷದಿಂದ ಫ್ರೀ ಕರೆಂಟ್ ಗ್ಯಾರಂಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ, ಅದಕ್ಕೆ ಬಿಜೆಪಿಯವರು ಉಚಿತ ಗ್ಯಾರಂಟಿಗಳನ್ನ ಘೋಷಣೆ ಮಾಡ್ತಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಆಗೆಲ್ಲಾ ಜನಪ್ರಿಯ ಮತ್ತು ಜನರಪರ ಕಾರ್ಯಕ್ರಮಗಳನ್ನ ಜಾರಿ ಮಾಡಿದೆ. ಇಂದಿರಾಗಾಂಧಿ ಕಾಲದಲ್ಲಿ ಉಳುವವನೆ ಭೂಮಿಯ ಒಡೆಯ ಸೇರಿ ಅನೇಕ ಕಾರ್ಯಕ್ರಮ ತರಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸಿಎಂಗಳು ಒಂದೊಂದು ಕೊಡುಗೆ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದರೂ ಆದರೆ ಇನ್ನೂ ಕೊಟ್ಟಿಲ್ಲ. ವೀರಪ್ಪ ಮೊಯ್ಲಿ, ಬಂಗಾರಪ್ಪ, ಅನೇಕ ಕಾರ್ಯಕ್ರಮ ಕೊಟ್ಟರು. ರಾಜ್ಯದಲ್ಲಿ ಬಿಜೆಪಿ ಅಧಿಕಾದಲ್ಲಿ ಬೆಲೆ ಏರಿಕೆ ಜಾಸ್ತಿ ಆಗಿತ್ತು. ಜನರು ಕಷ್ಟ ಅನುಭವಿಸುತ್ತಿದ್ದರು. ಇದಕ್ಕಾಗಿ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದರು. ಸಿದ್ದರಾಮಯ್ಯ ಅನ್ನದಾತ ಎಂದು ಹೆಸರು ಪಡೆದರು. ನಾವು ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಕೊಡುವ ಮಾತು ಕೊಟ್ಟಿದ್ದೆವು. ಅದರಂತೆ ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವು ಎಂದು ತಿಳಿಸಿದರು.

ಗ್ಯಾರಂಟಿ ಕೊಟ್ಟಾಗ ಮೋದಿ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಹೇಳಿ ಟೀಕೆ ಮಾಡಿದ್ದರು. ಮೋದಿ ಮತ್ತು ಅವರ ಬಾಲಂಗೋಚಿಗಳು ವಿರೋಧ ಮಾಡಿದ್ದರು. ಬಿಜೆಪಿಯವರು ಬರೀ ಘೋಷಣೆ ಮಾಡಿದ್ದಾರೆ. ನಾವು ಗೃಹಲಕ್ಷ್ಮಿ ಯೋಜನೆ ತಂದಿದ್ದೇವೆ, ಇದರಿಂದ ಹೆಣ್ಣುಮಕ್ಕಳಿಗೆ ಸಹಕಾರ ಆಗಿದೆ. ಬಿಜೆಪಿ ಅವರು ಆಗುವುದಿಲ್ಲ ಎಂದರು. ಜೊತೆಗೆ ಅವರು ಒಂದೊಂದು ಚುನಾವಣೆಗೆ ಒಂದು ಗ್ಯಾರಂಟಿ ಕೊಟ್ಟಿದ್ದಾರೆ. ಅವರು ಹೇಳೋದು ಒಂದು, ಮಾಡೋದು ಒಂದು.ಬಿಜೆಪಿಗೆ ದೇಶ, ರಾಜ್ಯದ ಚಿಂತೆ ಇಲ್ಲ ಎಂದು ಕಿಡಿಕಾರಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow