ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆಯನ್ನು ಏರಿಸಿದೆ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರ ರೈತರ ಹಿತದೃಷ್ಟಿಯಿಂದ ಹಾಲಿನ ಬೆಲೆಯನ್ನು ಏರಿಸಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮದು ರೈತರು, ಕಾರ್ಮಿಕರ ಪರವಾಗಿ ಇರುವ ಸರ್ಕಾರ. ರೈತರಿಗಾಗಿ ನಾವು ಹಾಲಿನ ದರ 4 ರೂ. ಏರಿಕೆ ಮಾಡಿದ್ದೇವೆ. ಹರಿಯಾಣ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಪಂಜಾಬ್ಗೆ ಹೋಲಿಸಿದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ ಎಂದು ತಿಳಿಸಿದರು.
ಇನ್ನೂ 10 ಸಾವಿರ ರೂ. ಇದ್ದ ಒಂದು ಮೊಬೈಲ್ ಬೆಲೆ 30 ಸಾವಿರ ರೂ. ಆಗಿದೆ. ಹಾಗೇ ಸಿಮೆಂಟ್ ಮತ್ತು ಉಸುಕಿನ ಬೆಲೆಯನ್ನೂ ಏರಿಕೆ ಮಾಡಿದೆ. ಟೂತ್ ಪೇಸ್ಟ್ 5 ರೂಪಾಯಿ ಇದ್ದದ್ದು 15 ರೂ. ಆಗಿದೆ. 268 ರೂ. ಇದ್ದ ಒಂದು ಮೂಟೆ ಸಿಮೆಂಟ್ ಬೆಲೆ 460 ರೂ. ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






