ಆಭರಣ ಪ್ರಿಯರೇ ಗಮನಿಸಿ.. ಇಳಿಕೆಯಾದ ಚಿನ್ನದ ಬೆಲೆ..! ಇಲ್ಲಿದೆ ಇಂದಿನ ಗೋಲ್ಡ್‌ ದರ ವಿವರ

ಫೆಬ್ರವರಿ 12, 2025 - 12:00
 0  13
ಆಭರಣ ಪ್ರಿಯರೇ ಗಮನಿಸಿ.. ಇಳಿಕೆಯಾದ ಚಿನ್ನದ ಬೆಲೆ..! ಇಲ್ಲಿದೆ ಇಂದಿನ ಗೋಲ್ಡ್‌ ದರ ವಿವರ

ಬೆಂಗಳೂರು: ನೀವು ಚಿನ್ನ ಖರೀದಿಸಲು ಯೋಚಿಸುತ್ತಿದ್ದೀರಾ? ಅಥವಾ ಬೆಳ್ಳಿ ಖರೀದಿಸುವ ಯೋಜನೆ ಇದೆಯೇ? ಹಾಗೇನಾದರೂ ಪ್ಲಾನ್ ಇದ್ದರೆ ಆಭರಣ ಖರೀದಿಗೆ ಇದಕ್ಕಿಂತ ಉತ್ತಮ ಸಮಯ ಇರಲಾರದು. ಯಾಕೆಂದರೆ ಇಂದು ಕಚ್ಚಾ ವಸ್ತುಗಳ ದರ ಭಾರಿ ಇಳಿಕೆಯಾಗಿದೆ. ಪರಿಣಾಮ ಚಿನ್ನ-ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಆಭರಣ ಪ್ರಿಯರಿಗೆ ಇದು ಗುಡ್ನ್ಯೂಸ್ ಎಂದೇ ಹೇಳಬಹುದು.

8,000 ರು ದಾಟಿದ್ದ ಆಭರಣ ಚಿನ್ನದ ಬೆಲೆ 7,940 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 8,700 ರೂಗಿಂತ ಒಳಗೆ ಬಂದಿದೆ. 18 ಕ್ಯಾರಟ್ ಚಿನ್ನದ ಬೆಲೆಯೂ 6,500 ರೂಗಿಂತ ಕಡಿಮೆ ಮಟ್ಟಕ್ಕೆ ಇಳಿದಿದೆ. ನಿನ್ನೆ ಅಲ್ಪ ಇಳಿಕೆಯಾಗಿದ್ದ ಬೆಳ್ಳಿ ಬೆಲೆ ಇವತ್ತು ಯಥಾಸ್ಥಿತಿಯಲ್ಲಿದೆ.

 ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 79,400 ರುಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 86,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,940 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 79,400 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,940 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಫೆಬ್ರುವರಿ 12ಕ್ಕೆ)

  • 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 79,400 ರೂ
  • 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 86,670 ರೂ
  • 18 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 64,970 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 994 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 79,400 ರೂ
  • 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 86,670 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 994 ರೂ

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow