ನಿಮ್ಮ ಅಡುಗೆಮನೆಯಲ್ಲಿ ಇರುವ ಸಾಮಾನ್ಯ ದ್ರವ್ಯವೇ ಆರೋಗ್ಯದ ರಹಸ್ಯ!

ಆಗಸ್ಟ್ 9, 2025 - 07:01
 0  4
ನಿಮ್ಮ ಅಡುಗೆಮನೆಯಲ್ಲಿ ಇರುವ ಸಾಮಾನ್ಯ ದ್ರವ್ಯವೇ ಆರೋಗ್ಯದ ರಹಸ್ಯ!

ಮನೆಯ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಜೀರಿಗೆ ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯದ ಪಾಲಿನ ದೈವಿಕ ಔಷಧ ಎಂದೇ ಪರಿಗಣಿಸಲಾಗಿದೆ. ಆಯುರ್ವೇದದಲ್ಲಿ ಜೀರಿಗೆ ನೀರಿನ ಮಹತ್ವ ಅಪಾರ ಎಂದು ತಿಳಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಜೀರಿಗೆ ನೀರು ಸೇವನೆ ಮಾಡುವ ಅಭ್ಯಾಸ ಆರೋಗ್ಯ ತಜ್ಞರಿಂದಲೂ ಶಿಫಾರಸು ಮಾಡಲ್ಪಟ್ಟಿದೆ.

ಜೀರಿಗೆ ನೀರಿನಲ್ಲಿ ಇರುವ ಔಷಧೀಯ ಗುಣಗಳು ದೇಹದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ. ಇದರ ಪರಿಣಾಮಗಳನ್ನು ಒಂದು ತಿಂಗಳವರೆಗೆ ನಿರಂತರವಾಗಿ ಸೇವಿಸಿ ನೋಡಿದರೆ ಸ್ಪಷ್ಟವಾದ ಲಾಭಗಳನ್ನು ಕಾಣಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿವೆ ಜೀರಿಗೆ ನೀರಿನ ಪ್ರಮುಖ ಆರೋಗ್ಯ ಲಾಭಗಳು:

ಜೀರ್ಣಕ್ರಿಯೆ ಸುಧಾರಣೆ:
ಜೀರಿಗೆ ನೀರು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗ್ಯಾಸ್, ಉಬ್ಬಸಲು, ಆಮ್ಲೀಯತೆ ಹಾಗೂ ಅಜೀರ್ಣದಂತಹ ಸಮಸ್ಯೆಗಳಿಗೆ ಇದೊಂದು ನೈಸರ್ಗಿಕ ಪರಿಹಾರ.

ತೂಕ ಇಳಿಕೆ:
ಜೀರಿಗೆ ನೀರು ಚಯಾಪಚಯ ಕ್ರಿಯೆಯನ್ನು (metabolism) ಹೆಚ್ಚಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತವೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಒಂದು ತಿಂಗಳು ಪ್ರತಿದಿನ ಸೇವಿಸಿದರೆ ಉತ್ತಮ ಫಲಿತಾಂಶ ಕಾಣಬಹುದು.

ರೋಗ ನಿರೋಧಕ ಶಕ್ತಿ:
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಮತ್ತು ಇಮ್ಯೂನ್ ಸಿಸ್ಟಂ ಬಲಪಡಿಸುತ್ತವೆ.

ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣ:
ಜೀರಿಗೆ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ. ಮಧುಮೇಹ ಇರುವವರು ಇದರಿಂದ ಲಾಭ ಪಡೆಯಬಹುದು. ಜೊತೆಗೆ, ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟುಕೊಳ್ಳುವಲ್ಲಿ ಸಹಕಾರಿ.

ಚರ್ಮ ಮತ್ತು ಕೂದಲು ಆರೋಗ್ಯ:
ಜೀರಿಗೆ ನೀರಿನ ಸೇವನೆಯು ಚರ್ಮದ ಹೊಳಪನ್ನು ಹೆಚ್ಚಿಸಿ ಮೊಡವೆ ಮತ್ತು ಕಪ್ಪು ಕಲೆಗಳನ್ನು ತಗ್ಗಿಸುತ್ತದೆ. ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಮನಸ್ಸಿಗೆ ಶಾಂತಿ:
ಜೀರಿಗೆ ನೀರಿನ ನಿಯಮಿತ ಸೇವನೆಯು ಒತ್ತಡ ಕಡಿಮೆ ಮಾಡಿ, ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಹೆಚ್ಚುವರಿ ಸಲಹೆ:

ಜೀರಿಗೆ ನೀರನ್ನು ಹಸಿಹಾಲಿನಲ್ಲಿ ಸೇವಿಸಿದರೆ ಇನ್ನೂ ಉತ್ತಮ. ಒಂದು ಚಮಚ ಜೀರಿಗೆ ತಂದು, ರಾತ್ರಿ ನೀರಿಗೆ ಹಾಕಿ ಮುಂಜಾನೆ ಆ ನೀರನ್ನು ಬಿಸಿ ಮಾಡಿ ಕುಡಿಯುವ ಅಭ್ಯಾಸವೇ ಹೆಚ್ಚು ಪರಿಣಾಮಕಾರಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow