Cannes 2025: ಕತ್ತಲ್ಲಿ PM ಮೋದಿ ನೆಕ್ಲೆಸ್ ಧರಿಸಿ ಮಿಂಚಿದ ಬಾಲಿವುಡ್ ನಟಿ..! ಎಲ್ಲರ ಕಣ್ಣುಗಳು ಆಕೆಯ ಮೇಲೆ

ಮೇ 21, 2025 - 20:00
 0  11
Cannes 2025: ಕತ್ತಲ್ಲಿ PM ಮೋದಿ ನೆಕ್ಲೆಸ್ ಧರಿಸಿ ಮಿಂಚಿದ ಬಾಲಿವುಡ್ ನಟಿ..! ಎಲ್ಲರ ಕಣ್ಣುಗಳು ಆಕೆಯ ಮೇಲೆ

ಕೇನ್ಸ್ ಚಲನಚಿತ್ರೋತ್ಸವವು ವಿವಿಧ ರೀತಿಯ ಉಡುಪುಗಳಲ್ಲಿ ಕಾಣಿಸಿಕೊಂಡ ಸುಂದರ ವಧುಗಳ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಅವರು ವಿಭಿನ್ನ ವೇಷಭೂಷಣಗಳನ್ನು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟಿ ರುಚಿ ಗುಜ್ಜರ್ ಮೋದಿ ಹಾರ ಧರಿಸುವ ಮೂಲಕ ಎಲ್ಲರ ಕಣ್ಣುಗಳನ್ನು ತನ್ನ ಮೇಲೆ ಬೀಳುವಂತೆ ಮಾಡಿದರು. ಕೇನ್ಸ್ ಉತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು, ಮತ್ತು ರುಚಿ ಆ ಕಾರ್ಯಕ್ರಮಕ್ಕಾಗಿ ಎಲ್ಲರ ಗಮನ ಸೆಳೆದರು,

ಭಾರತೀಯ ನಟಿ ರುಚಿ ಗುಜ್ಜರ್ ಅವರು ಕೇನ್ಸ್‌ ರೆಡ್ ಕಾರ್ಪೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸಿದ್ದಾರೆ.

ನಟಿ ರುಚಿ ಗುಜ್ಜರ್ ಅವರ ನೆಕ್ಲೇಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಹಾಕಿದ್ದಾರೆ.ಪ್ರಧಾನಿ ಮೋದಿ ಅವರ ಫೋಟೋ ನೆಕ್ಲೆಸ್ ಬಗ್ಗೆ ಮಾತನಾಡಿದ ರುಚಿ ಗುಜ್ಜರ್ ಅವರು ಇದು ಬರೀ ಗ್ಲಾಮರ್‌ಗೋಸ್ಕರ ನಾನು ಧರಿಸಿಲ್ಲ. ಹೃದಯಪೂರ್ವಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಮರ್ಪಿಸುತ್ತಿದ್ದೇನೆ ಎಂದಿದ್ದಾರೆ.

ರಾಜಸ್ಥಾನದ ಸಾಂಪ್ರದಾಯಿಕ ಲೆಹಂಗಾದಲ್ಲಿ ಕಾಣಿಸಿಕೊಂಡಿರುವ ರುಚಿ ಗುಜ್ಜರ್ ಅವರು ನರೇಂದ್ರ ಮೋದಿ ಅವರು ನಮ್ಮ ದೇಶದ ಸಾಂಸ್ಕೃತಿಕ ಹೆಮ್ಮೆ ಮತ್ತು ಅವರ ನಾಯಕತ್ವಕ್ಕೆ ಗೌರವಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow