ಮನೆಗಳ ವಿಷಯದಲ್ಲಿ ಹಣ ತಗೊಂಡ್ರೆ ಬಡವರ ಶಾಪ ತಟ್ಟದೇ ಬಿಡುವುದಿಲ್ಲ: ಸಚಿವ ಜಮೀರ್ ಅಹ್ಮದ್

ಬೆಂಗಳೂರು: ಮನೆಗಳ ವಿಷಯದಲ್ಲಿ ಹಣ ತಗೊಂಡ್ರೆ ಬಡವರ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಇಂದು ಸರ್ಕಾರಿ ನಿವಾಸದ ಬಳಿ ಮಾತನಾಡಿದ ಅವರು, ಬಡವರ ಮನೆಗಳ ವಿಷಯದಲ್ಲಿ ಯಾರಾದ್ರೂ ದುಡ್ಡು ತಗೊಂಡ್ರೆ ಅವರ ಮಕ್ಕಳು ಹುಳ ಬಿದ್ದು ಸಾಯುತ್ತಾರೆ. ಬಡವರ ಮನೇಲಿ ಹಣ ತಗೊಂಡರೆ ಅವರಿಗೆ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಜಮೀರ್ ಹೇಳಿದ್ದಾರೆ.
ಬಿಜೆಪಿಗರು ಹೇಳುವುದೇ ಬೇಡ ನಾನೇ ರಾಜೀನಾಮೆ ನೀಡುತ್ತೇನೆ. ಯಾರ ಬಳಿಯೂ ನಾವು ದುಡ್ಡು ಪಡೆದು ಮನೆ ಕೊಟ್ಟಿಲ್ಲ. ರಾಮನಗರಕ್ಕೆ ಕೂಡ ಮನೆ ಕೊಟ್ಟಿದ್ದೇವೆ. ಎಲ್ಲರಿಗೂ ಮನೆ ಕೊಟ್ಟಿದ್ದೇವೆ. ದುಡ್ಡು ಪಡೆದು ಮನೆ ಕೊಟ್ಟರೆ ಹುಳ ಬಿದ್ದು ಸಾಯುತ್ತೇವೆ. ಬಡವರ ಹಣ ಪಡೆದ್ರೆ ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ?. ಯಾರು ಹಣ ಪಡೆದಿದ್ದಾರೆ ಎಂದು ಪಾಟೀಲ್ ಹೇಳಲಿ. ಅವರ ಮೇಲೆ ಕ್ರಮ ತೆಗೆದುಕೊಳ್ಳೋಣ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






